Quantity
Product Description
ಇದ್ದಕ್ಕದ್ದಿಂತೆ ಧಡ್ ಎಂದು ಯೋಚನೆ ಬಂತು ಪಾರಿ ಎಲ್ಲಿ ಹೋದ್ಲು!!! ಗಾಬರಿಯಲ್ಲಿ ಬಾತ್ರೂಮ್ನಲ್ಲಿ ನೋಡಿದರೆ ಅಲ್ಲೂ ಇಲ್ಲ! ಗಿಡಗಳಿಗೆ ನೀರು ಹಾಕುತ್ತಿರಬಹುದಾ ಎಂದು ಅಂಗಳಕ್ಕೆ ಹೋಗಿ ನೋಡಿದರೆ ಅಲ್ಲೂ ಇಲ್ಲ!
`ಪಾರಿ....
`ಪಾರಿ......
`ಪಾರಿ........
ಎಷ್ಟೋ ವರ್ಷಗಳ ನಂತರ ಅವಳ ಹೆಸರು ಹಿಡಿದು ಕೂಗುವಾಗ ನಾಲಿಗೆ ತಡೆ ಹಿಡಿದಂತಾಯಿತು. ಉತ್ತರ ಬರಲಿಲ್ಲ. ಸದಾಶಿವ ಈಗ ನಿಜಕ್ಕೂ ಗಾಬರಿಯಾದ. ಏನು ಮಾಡಬೇಕು ಈಗ? ಯಾರಿಗೆ ಹೇಳಬೇಕು? ಮಕ್ಕಳಿಗಾ ಇಲ್ಲವಾ ಪೋಲಿಸರಿಗಾ ಅಂದುಕೊಳ್ಳುವುದರಲ್ಲಿ ಅರೆ! ಪಾರಿಗೇ ಫೋನ್ ಮಾಡಬಹುದಲ್ವಾ ಎಂದು ಹೊಳೆಯಿತು. ಕೂಡಲೇ ಅವಳಿಗೆ ಕಾಲ್ ಮಾಡಿದ. ಅವರದ್ದೇ ರೂಮಿನಲ್ಲಿ ರಿಂಗ್ ಆಗುವುದು ಕೇಳಿಸಿತು! ಫೋನ್ ಇಲ್ಲೇ ಇದೆಯಾ! ಫೋನ್ ಕೂಡಾ ಜೊತೆಗಿಲ್ಲದೆ ಎಲ್ಲಿಗೆ ಹೋದಳು ಎಂದು ಅತ್ತ ಓಡಿದವನು ಸ್ತಂಭೀಭೂತನಾಗಿ ನಿಂತುಬಿಟ್ಟ...
Publication Year
2024
Author
B V Bharathi
ISBN-13
9789393224408
Binding
Soft Bound
Publisher
Sawanna Enterprises
Number of Pages
140
Length
22 CMS
Language
Kannada