Quantity
Product Description
ಈ ಪುಸ್ತಕವು ಹಲವು ಲೇಖಕರು ಸೇರಿ ಬರೆದಿರುವಂಥದ್ದು, ಬರೆದಿರುವವರೆಲ್ಲ
ಸಾಹಿತಿಗಳಲ್ಲ. ಈ ಪುಸ್ತಕವು ಸಾಹಿತ್ಯ ವಿಮರ್ಶೆಯ ಪುಸ್ತಕವಲ್ಲ. ಒಬ್ಬ
ಲೇಖಕನನ್ನು ಬೇರೆ ಬೇರೆ ತಲೆಮಾರುಗಳ, ಭಿನ್ನ ಹಿನ್ನೆಲೆಗಳ ಓದುಗರು ಹೇಗೆ
ಓದುತ್ತಾರೆ, ಓದುವುದಿಲ್ಲ, ಯಾಕೆ ಓದುತ್ತಾರೆ ಎಂಬುದನ್ನು ತಿಳಿಯುವ ಒಂದು
ಪ್ರಯತ್ನ, ಪ್ರಯೋಗ. ಸಮುದಾಯದ ಓದಿನ ಹಿಂದಿರುವ ಅಪೇಕ್ಷೆಗಳು ಮತ್ತು
ಓದುಗ ಸಮುದಾಯದ ಮೇಲೆ ಹೇರುವ ನಾನಾ ರೀತಿಯ ಒತ್ತಾಯಗಳ ನಡುವೆ
ಮೂಡುವ ಕರ್ಷಣದ ಸ್ವರೂಪವನ್ನು ತಿಳಿದುಕೊಂಡು ತಿಳಿಸುವ ಪ್ರಯತ್ನ.
ಹತ್ತು ಹಲವು ಲೇಖಕರು, ಓದುಗರ ವಿಶಾಲ ವರ್ಗ ಇವರನ್ನೆಲ್ಲ ಒಳಗೊಂಡ
ಸಮೀಕ್ಷೆ, ಸಂಶೋಧನೆ, ಅಧ್ಯಯನ ಇನ್ನೂ ಹೆಚ್ಚು ಅಧಿಕೃತವಾಗಿರುತ್ತದೆ, ಸಮಗ್ರವಾಗಿರು
ತ್ತದೆ ನಿಜ. ಆದರೆ ವೈಯಕ್ತಿಕ ನೆಲೆಯಲ್ಲಿ ಇಂತಹ ಪ್ರಯತ್ನಗಳು ಕಷ್ಟ. ಈ ಪುಸ್ತಕವು
ಬೇರೆ ಲೇಖಕರು, ಬೇರೆ ಕಾಲಮಾನ, ಸಾಂಸ್ಕöÈತಿಕ ಸಂದರ್ಭಗಳಿಗೂ ವಿಸ್ತರಿಸಲಿ
ಅನ್ನುವುದು ಕೂಡ ಈ ಕೃತಿಯನ್ನು ಪ್ರಕಟಿಸುವಲ್ಲಿ ಇರುವ ಒಳ ಆಸೆಗಳಲ್ಲಿ ಒಂದು.
Author
K Satyanarayana
Binding
Soft Bound
Number of Pages
196
Publication Year
2026
Publisher
Amulya Pustaka
Height
2 CMS
Length
22 CMS
Weight
200 GMS
Width
14 CMS
Language
Kannada