Product Description
೧೯೮೯ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದ ಡಾ|| ಹಾ. ಮಾ. ನಾಯಕರು ಅಂಕಣ ಬರೆಹವನ್ನು ಸಾಹಿತ್ಯದ ನೆಲೆಗೇರಿಸಿದ ಹಿರಿಮೆಗೆ ಪಾತ್ರರಾಗಿರುವಂಥವರು. ಸೃಜನಶೀಲ ಸಾಹಿತ್ಯದಿಂದಲೇ ಮೊದಲ ಹೆಜ್ಜೆಯನ್ನು ಇಟ್ಟರಾದರೂ ಅನುವಾದ, ಅಂಕಣ ಸಾಹಿತ್ಯ, ವಿಮರ್ಶೆ, ಜಾನಪದ, ಸಂಪಾದನ, ಭಾಷಾವಿಜ್ಞಾನ ಮೊದಲಾದ ಕ್ಷೇತ್ರಗಳಲ್ಲಿ ಗಣನೀಯವಾಗಿರುವಂಥ ಸೇವೆಯನ್ನು ಸಲ್ಲಿಸಿರುವಂಥವರು. ದೇಶ-ವಿದೇಶಗಳಲ್ಲಿ ವ್ಯಾಪಕವಾಗಿ ಸಂಚಾರ ಮಾಡಿದ್ದ ಅವರು ದಕ್ಷ ಕಾರ್ಯಸಂಘಟಕರೂ ಆಗಿದ್ದರು. ಕುಲಪತಿ ಹುದ್ದೆವರೆಗಿನ ಹಲವಾರು ಅಧಿಕಾರ ಸ್ಥಾನಗಳನ್ನು ದಕ್ಷತೆಂದ ನಿರ್ವಹಿಸಿ ಹೆಸರು ಗಳಿಸಿದ್ದವರು. ಅಂಕಣ ಸಾಹಿತ್ಯಕ್ಕಂತೂ ಜೀವಂತಿಕೆ, ಮಾಹಿತಿ ಸಮೃದ್ಧಿ, ವಿಮರ್ಶನ ಪ್ರಜ್ಞೆ, ಔಚಿತ್ಯಪೂರ್ಣತೆಗಳನ್ನು ಸಮನಿಸಿದವರು. ಉಜ್ವಲ ಕನ್ನಡ ಪ್ರೇಮಿ, ಉತ್ತಮ ವಾಗ್ಮಿ ಆಗಿದ್ದ ಅವರು ಅತ್ಯಂತ ಜನಪ್ರಿಯ ಅಂಕಣಕಾರರೇ ಆಗಿದ್ದಂಥವರು. ಈ ಮಾಲೆಯ ರೂವಾರಿಗಳಲ್ಲಿಯೂ ಒಬ್ಬರಾಗಿದ್ದವರು. ಹಾ.ಮಾ.ನಾ ಅವರ ಮೊದಲ ತಂಡದ ವಿದ್ಯಾರ್ಥಿಗಳೂ, ಸಹೋದ್ಯೋಗಿಯೂ, ನಿಕಟವರ್ತಿಯೂ ಆಗಿದ್ದ ಡಾ. ಪ್ರಧಾನ್ ಗುರುದತ್ತ ಈ ಪುಸ್ತಕದ ಲೇಖಕರು.