Quantity
Product Description
ಸಿದ್ದಯ್ಯ ಆರ್.ಎಸ್ ಅವರು ಬರೆದಿರುವ “ಕುವೆಂಪು ಕಾವ್ಯದ ವಿಭಿನ್ನ ನೆಲೆಗಳು” ಎಂಬ ಈ ಸಂಶೋಧನಾ ಕೃತಿಯು ತುಂಬಾ ವೈಶಿಷ್ಟ್ಯಪೂರ್ಣವಾಗಿ ಅಧ್ಯಯನಕ್ಕೆ ಒಳಪಟ್ಟಿದೆ. ಕುವೆಂಪು ಅವರ ಕಾವ್ಯದ ಮೇಲೆ ನಡೆದಿರುವ ಇದುವರೆಗಿನ ಚಿಂತನೆಗಳು ಒಂದು ನೆಲೆಯಾದರೆ, ಇಲ್ಲಿನ ಅಧ್ಯಯನವು ಮತ್ತೊಂದು ನೆಲೆಯಲ್ಲಿ ನಿಲ್ಲುತ್ತದೆ. ಇಲ್ಲಿ ಕುವೆಂಪು ಚಿಂತನೆಗಳನ್ನು ಮರುಪರಿಶೀಲಿಸಿ, ಹೊಸ ಚಿಂತನೆಯ ನವಮಾರ್ಗವನ್ನು ಕಂಡುಕೊಳ್ಳಲಾಗಿದೆ. ಈ ಸಂಶೋಧನೆಯು ಸಮಕಾಲೀನತೆಗೆ ಸ್ಪಂದಿಸಿರುವ ರೀತಿಯೇ ವಿಶಿಷ್ಟವಾದುದು. ನಮ್ಮ ದೇಶದ ಜಾತಿಪದ್ಧತಿ, ಮೂಢನಂಬಿಕೆ, ಸಾಮಾಜಿಕ ಅಸಮಾನತೆ ಹಾಗೂ ಪುರೋಹಿತಶಾಹಿ ಪ್ರವೃತ್ತಿಗಳನ್ನು ಅತ್ಯಂತ ದಿಟ್ಟತನದಿಂದ ಸಮರ್ಥವಾಗಿ ಯಾವುದೇ ಒಡಂಬಡಿಕೆಗಳಿಲ್ಲದೆ ಪ್ರಶ್ನಿಸಿ, ವೈಚಾರಿಕ ಚಿಕಿತ್ಸೆಗೆ ಒಳಪಡಿಸಿರುವ ಕುವೆಂಪುರವರ ಕಾವ್ಯವನ್ನು ವೈಜ್ಞಾನಿಕ ಮನೋಧರ್ಮದಲ್ಲಿ ಅಧ್ಯಯನವನ್ನು ಮಾಡಲಾಗಿದೆ. ಕುವೆಂಪು ಅವರ ಆಶಯದಂತೆ ಅವರ ಕಾವ್ಯದ ಚಿಂತನಾAಶ ಮತ್ತು ಭಾವನಾಂಶ ಹಾಗೂ ಕಾವ್ಯಾಂಶಗಳನ್ನು ಕುರಿತ ಅಧ್ಯಯನ ಈ ಸಂಶೋಧನಾ ಮಹಾಪ್ರಬಂಧದ ವಿಶೇಷ. ಕುವೆಂಪು ಅವರ ಸಾಹಿತ್ಯದ ಮೇಲೆ ಅಂಬೇಡ್ಕರ್ರವರ ಚಿಂತನೆಯ ಪ್ರತ್ಯಕ್ಷ ಪ್ರಭಾವವಿದೆ ಎಂಬುದನ್ನು ಸಾಧಿಸಿ ತೋರಿಸಿರುವುದರಲ್ಲಿ ಈ ಸಂಶೋಧನಾ ಕೃತಿಯ ಮಹತ್ವವಿದೆ. ‘ಬಹುತ್ವದಲ್ಲಿ ಏಕತೆ’ಯನ್ನು ಉಸಿರಾಡುತ್ತಿರುವ ಭಾರತೀಯರಿಗೆ ಈ ಕೃತಿ ಅಧ್ಯಯನ ಯೋಗ್ಯವಾಗಿದೆ.
Binding
Soft Bound
Author
Dr R S Siddaiah
Number of Pages
420
Publisher
Helmand Books New Delhi
Publication Year
2024
Height
5 CMS
Length
22 CMS
Weight
1000 GMS
Width
15 CMS
Language
Kannada