Product Description
Shankaranna ರಸ್ತೆಯ ಆಟೋಗಳ ಮೇಲೆ, ಸ್ಟಿಕ್ಕರುಗಳಲ್ಲಿ, ಡ್ರೈವರುಗಳ ಮನಸ್ಸುಗಳಲ್ಲಿ, ಅಸಂಖ್ಯ ಅಭಿಮಾನಿಗಳ ನೆನಪುಗಳಲ್ಲಿ ಶಂಕರ್ನಾಗ್ ಅವರು ಬೆರೆತಿರುತ್ತಾರೆ. ಶಂಕರನಾಗ್ ಅವರು ನಂದಿ ಬೆಟ್ಟಕ್ಕೆ ರೋಪ್ ವೇ, ಬೆಂಗಳೂರಿಗೆ ಮೆಟ್ರೋ ರೈಲು, ರಂಗಮಂದಿರ ಇವೆಲ್ಲಕ್ಕೂ ನಕ್ಷೆ ತಯಾರಿಸಿ ಸರ್ಕಾರದ ಮುಂದೆ ಇಟ್ಟಿದ್ದು ಇಡೀ ಕನ್ನಡ ನಾಡೇ ಬಲ್ಲ ಸಂಗತಿ.ಕನ್ನಡ ಚಿತ್ರರಂಗ ಕಂಡ ಒಬ್ಬ ಅದ್ಭುತ ನಟ, ಅವರ ಸೇವೆ ಅತ್ಯಲ್ಪ ಸಮಯವಾದರೂ ಮರೆಯಲಾಗದ ನೆನಪು ಬಿಟ್ಟಿದ್ದಾರೆ.ಕನ್ನಡ ನಾಡು ಶಂಕರಣ್ಣನಂತಹ ಸುಂದರ ಕನಸಿಗರಿಲ್ಲದೆ ಸೊರಗುತ್ತಿರಬಹುದೆಂಬ ಅನಿಸಿಕೆಯನ್ನು ನಿರಂತರವಾಗಿರಿಸಿದೆ.