Quantity
Product Description
ಶಾಂತಲೆಯ ಮೇಲೆ ಈಗಾಗಲೇ ಬಹಳ ಕೃತಿಗಳು ಬಂದಿವೆ. ಅವುಗಳಲ್ಲಿ ಶಾಂತಲೆ ಓದುಗರಿಗೆ ನಾಟ್ಯರಾಣಿಯಾಗಿ, ನಾಟ್ಯ ಸರಸ್ವತಿಯಾಗಿ ಕಂಡುಬಂದರೆ, ಇಲ್ಲಿನ ಶಾಂತಲೆ ಮಹಾಕಲಾವಿದೆಯ ಜೊತೆಗೆ ಮಹಾನ್ ದೈವಿಕಳಾಗಿಯೂ, ಅತ್ಯಪೂರ್ವ ಮಾನವೀಯ ಮೌಲ್ಯಗಳ ಸಾಕಾರ ಮೂರ್ತಿ ಯಾಗಿಯೂ ಪಡಿಮೂಡಿದ್ದಾಳೆ. ಬಿಟ್ಟಿದೇವನ ಪಾತ್ರಸೃಷ್ಟಿಯೂ ಅಷ್ಟೇ. ಕರುನಾಡಿನ ಇತಿಹಾಸದಲ್ಲಿ ಅಚ್ಚಕನ್ನಡಿಗರ ಮೆಚ್ಚಿನ ದೊರೆ ವಿಷ್ಣುವರ್ಧನ. ಅವನ ಮೇರು ವ್ಯಕ್ತಿತ್ವವನ್ನು ಇಷ್ಟು ಉನ್ನತಮಟ್ಟದಲ್ಲಿ ದಾಖಲಿಸಿದ ಬೇರೆ ನಿದರ್ಶನವಿಲ್ಲ. ಅಧ್ಯಾಯದಿಂದ ಅಧ್ಯಾಯಕ್ಕೆ ಓದುತ್ತಾ ಹೋದಂತೆ ಪ್ರತಿ ಕನ್ನಡಾಭಿಮಾನಿ ಓದುಗನಿಗೂ ಅನ್ನಿಸುತ್ತದೆ, ಇಂತಹ ಒಬ್ಬ ನಿಕಷಮತಿಯ ವೀರಕನ್ನಡಿಗ ದೊರೆಯೊಬ್ಬನನ್ನು ಅರಿಯಲು, ಅವನ ಅಂತರಂಗವನ್ನು ತಟ್ಟಲು, ಅವನ ಮನಸ್ಥಿತಿಯನ್ನು ಮುಟ್ಟಲು ನಮಗೆ ಇಷ್ಟು ವರ್ಷಗಳು ಬೇಕಾಯಿತೆ? ಇತಿಹಾಸದ ಪುಟಗಳ ಧೂಳಿನಡಿ ಹುದುಗಿಹೋಗಿದ್ದ ಅಪೂರ್ವ ವಜ್ರದ ಹರಳೊಂದು ಹೊರಬಂದು ತನ್ನ ನಿಜವ ತೋರ್ಪಡಿಸಲು ಇಷ್ಟು ಕಾಲಾವಕಾಶ ತೆಗೆದುಕೊಂಡಿತೆ? ಎಂದು. ಇಲ್ಲಿನ ರಾಜ ರಾಣಿಯರು ಕೇವಲ ಗಂಡ ಹೆಂಡತಿಯರಾಗಷ್ಟೇ ಉಳಿದಿಲ್ಲ. ಅರ್ಧನಾರೀಶ್ವರ ತತ್ವದ ಪಡಿಯಚ್ಚುಗಳಾಗಿ ಒಡಮೂಡಿದ್ದಾರೆ. ಕೃತಿಯ ಕೊನೆಯ ಅಧ್ಯಾಯವಾದ ಅಸ್ತಮಾನದಲ್ಲಿ ಅವರಿಬ್ಬರ ಅಸ್ತಮಾನವೂ ಆಗುತ್ತದೆ. ಆದರಿಲ್ಲಿ ಆ ಎರಡು ಜೀವಿಗಳ ಸಾವುಗಳು ವಯೋಸಹಜವಾಗಿ ಘಟಿಸುವ ಸಾಮಾನ್ಯ ಮರಣಗಳಂತೆನಿಸುವುದಿಲ್ಲ. ಅದರ ಬದಲು ಸಾವಕಾಶವಾಗಿ ದಕ್ಕಿದವಕಾಶದಲ್ಲಿ ಸಕಾರಾತ್ಮಕವಾಗಿ ಬೆಳಗಿದ ಹಣತೆಗಳೆರಡು ಕೊನೆಗೊಂದು ದಿನ ಸದ್ದಿಲ್ಲದೇ ಶೂನ್ಯದಲ್ಲಿ ಲೀನವಾದಂತೆ, ಎಲ್ಲೋ ಹುಟ್ಟಿ ಎಲ್ಲೆಲ್ಲೋ ಹರಿದು, ಸಾರ್ಥಕತೆ ಪಡೆದುಕೊಂಡ ಜೀವನದಿಗಳೆರಡು ಹರಿದೂ.... ಹರಿದೂ.... ಅಂತಿಮವಾಗೊಂದು ಕ್ಷಣ ಮಹಾಸಾಗರದೊಡಲೊಳಗೆ ಮಿಲನವಾದಂತೆ. ಇದು ನಮ್ಮ ಹೆಮ್ಮೆಯ ಶಾಸ್ತ್ರಿಗಳು ಚಿತ್ರಿಸಿರುವ ಶಾಂತಲೆ ಹಾಗೂ ಬಿಟ್ಟಿದೇವನ ವ್ಯಕ್ತಿತ್ವ ವಿಶೇಷ.
Weight
400 GMS
Width
14 CMS
Length
22 CMS
Height
3 CMS
Publication Year
2025
Author
S Rudramurthy Shastry
Publisher
Tanu Manu Prakashana
Number of Pages
350
Language
Kannada