Product Description
ಸುಬ್ರಮಣ್ಯ ಭಾರತಿಯವರು ‘ಮಹಾಕವಿ ಭಾರತಿಯಾರ್’ ಆಗುವಲ್ಲಿ ವಿವೇಕಾನಂದರ ಶಿಷ್ಯೆ ಸೋದರಿ ನಿವೇದಿತಾ ಅವರ ಕಾಣಿಕೆ ಬಲು ಹಿರಿದು. 1906ರಲ್ಲಿ ವಾರಾಣಸಿಯಲ್ಲಿ ಕಾಂಗ್ರೆಸ್ ಅಧಿವೇಶನಕ್ಕೆ ಭಾರತಿಯಾರ್ ಅವರೊಬ್ಬರೇ ಹೋದಾಗ ನಿವೇದಿತ ನಿಮ್ಮ ಹೆಂಡತಿಯನ್ನು ಕರೆತರಲಿಲ್ಲವೆ? ಎಂದು ಕೇಳಿದಾಗ ‘ಪತ್ನಿಯನ್ನು ಹೋದಲ್ಲೆಲ್ಲ ಕರೆದೊಯ್ಯುವ ಪದ್ಧತಿ ನಮ್ಮಲ್ಲಿಲ್ಲ’ ಎಂದಾಗ ‘ಗಂಡ ಹೆಂಡತಿ ಎಂದರೆ ಮುಖದಲ್ಲಿರುವ ಎರಡು ಕಣ್ಣುಗಳಿದ್ದಂತೆ. ಎದುರು ಕಾಣುವ ದೃಶ್ಯವನ್ನು ಪೂರ್ಣ ನೋಡಲು ಎರಡೂ ಕಣ್ಣುಗಳು ಬೇಕು. ಒಂದು ಕಣ್ಣಿನಿಂದ ತಮ್ಮ ಬದುಕನ್ನು ಭಾರತೀಯ ನಾರಿತ್ವದ ವಿಮೋಚನೆಗಾಗಿ ಹೋರಾಟವನ್ನು ನಡೆಸಲು ನಿರ್ಧರಿಸುತ್ತಾರೆ ಹಾಗೂ ಕಾರ್ಯರೂಪಕ್ಕೆ ತರುತ್ತಾರೆ. ಭಾರತಿಯಾರ್ ಬದುಕಿದ್ದು ಕೇವಲ 39ವರ್ಷ. ಈ ಅಲ್ಪಾವಧಿಯಲ್ಲಿ ಅವರು ತಮಿಳು ಸಾಹಿತ್ಯಕ್ಕೆ, ತಮಿಳರಿಗೆ ಹಾಗೂ ಮಾನವೀಯತೆಗೆ ನೀಡಿದ ಮಾರ್ಗದರ್ಶನ, ಅವರನ್ನು ವಿಶ್ವಮಾನ್ಯರನ್ನಾಗಿಸಿದೆ.