Quantity
Product Description
ಖ್ಯಾತ ಸಾಹಿತಿ ಕೆ ಎಸ್ ನರಸಿಂಹಸ್ವಾಮಿ ಅವರ ಹೆಸರು ಕೇಳದ ಮನೆ ಇಲ್ಲ. ಅವರನ್ನು ಪ್ರೀತಿಸದ ಓದುಗರಿಲ್ಲ. ಅವರ 'ಮೈಸೂರ ಮಲ್ಲಿಗೆ'ಯಂತೂ ಎಲ್ಲರ ಎದೆಯಾಳದ ಗೀತೆ. ಅಷ್ಟು ಜನಪ್ರಿಯರಾದ ಕೆ ಎಸ್ ನರಸಿಂಹ ಸ್ವಾಮಿ ಅವರ ಬಗ್ಗೆ ಓದುಗರಿಗೆ ಏನೇನೂ ಗೊತ್ತಿಲ್ಲ ಎನ್ನುವಷ್ಟು ಕಡಿಮೆ. ದಾಂಪತ್ಯ ಗೀತೆಗೆ ಇನ್ನೊಂದು ಹೆಸರೇ ಆದ ಕೆ ಎಸ್ ನ ಅವರ ಬದುಕಿನ ಬಗ್ಗೆ ಅವರ ಮಗನೇ ಬರೆದ ಮೊದಲ ಕೃತಿ ಇದು. ಕೆ ಎಸ್ ನ ಅವರ ಬಗ್ಗೆ, ಅವರ ಒಡನಾಟ ಸಾಹಿತ್ಯ ನಂಟಿನ ಬಗ್ಗೆ ಇದು ಅಧಿಕೃತ ಮಾಹಿತಿಯೂ ಹೌದು. ಚಂದದ ನಿರೂಪಣೆಯ, ಹಾಸ್ಯ ಲೇಪಿತವಾದ ಈ ಕೃತಿ ನೀವು ಓದಲೇಬೇಕು. ಇದರಿಂದ ಕೆ ಎಸ್ ನ ನಿಮ್ಮ ಹೃದಯಕ್ಕೆ ಇನ್ನಷ್ಟು ಹತ್ತಿರವಾಗುತ್ತಾರೆ. ಖ್ಯಾತ ಕಲಾವಿದ ನಂಜುಂಡಸ್ವಾಮಿ ಅವರ ಮುಖಪುಟ ಹಾಗೂ ಉದಯ ಗಾಂವಕರ ಅವರ ಒಳಚಿತ್ರಗಳು ಕವಿಗೆ ಇನ್ನಷ್ಟು ಮೆರುಗು ನೀಡಿವೆ.
Binding
Soft Bound
Author
K N Mahabala
Publisher
Bahuroopi
Publication Year
2024
Number of Pages
144
Height
2 CMS
Weight
200 GMS
Width
14 CMS
Length
22 CMS
Language
Kannada