Quantity
Product Description
ರಾಗ ಇದೆಯಲ್ಲ, ಅದು ಹುಟ್ಟುವಾಗ ಒಂದು ಮಗು ಥರಾನೆ, ಹಂಗೇ ಹುಟ್ಟುತ್ತೆ, ಹಾಗೆ... ಹಾಗೇ ಬರುತ್ತೆ... ಆಮೇಲೆ ಅದಕ್ಕೆ ಅಲಂಕಾರ ಮಾಡೋದು... ಯಾವ ಸ್ವರವನ್ನು ಎಲ್ಲಿ ಅಲಂಕರಿಸಬೇಕು, ಎಲ್ಲಿ ಎಷ್ಟು ಇರಬೇಕು ಅಂತ. ಸೊಂಟದ ಡಾಬನ್ನ ನೆತ್ತಿಗೆ ಹಾಕಕ್ಕಾಗಲ್ಲ. ಹಂಗೇ ಕಿರೀಟವನ್ನು ಸೊಂಟಕ್ಕೆ ತೊಡಿಸಕ್ಕೆ ಆಗಲ್ಲ. ಮುದುಕಿಯ ಅಲಂಕಾರವನ್ನು ಹುಡುಗಿಗೆ ಅಥವಾ ಹುಡುಗಿಯ ಅಲಂಕಾರವನ್ನು ಚಿಕ್ಕ ಮಗುವಿಗೆ ಮಾಡಲಿಕ್ಕಾಗಲ್ಲ. ಯಾವುದಕ್ಕೆ ಎಷ್ಟು, ಹೇಗೆ ಅಲಂಕಾರ ಮಾಡಬೇಕು ಅಂತ ಯೋಚಿಸಿ ಮಾಡಬೇಕಾಗುತ್ತೆ. ರಾಗವೊಂದು ಈಗ ಹುಟ್ಟಿ ಅವರ ಬೊಗಸೆಯಲ್ಲಿದೆ ಎಂಬಂತೆ ಕೈಗಳ ಲಾಸ್ಯ ಇತ್ತು... ಕಿಟಿಕಿಯಿಂದ ಹಾದು ಬಂದ ಬೆಳಕಿನ ಕಿರಣಗಳು ಅವರ ಬೊಗಸೆಯಲ್ಲಿ ರಾಗಲಾಸ್ಯ ಸೃಷ್ಟಿಸಿದ್ದವು". ವಿಶ್ವ ಪ್ರಸಿದ್ಧ ಸರೋದ್ ಮಾಂತ್ರಿಕ ಪಂಡಿತ್ ರಾಜೀವ ತಾರಾನಾಥರ ಜೀವನ ಚಿತ್ರಣವಿದು. ಅಪಾರ ಗೌರವ, ಪ್ರೀತಿ, ಶ್ರದ್ಧೆಯಿಂದ ಸುಮಂಗಲಾ ಅವರು ಈ ಕೃತಿಯನ್ನು ಸಂಪಾದಿಸಿಕೊಟ್ಟಿದ್ದಾರೆ. ರಾಜೀವ ತಾರಾನಾಥರ ಬದುಕಿನ ಕೆಲ ಪುಟಗಳ ಚಿತ್ರಣ ಹಾಗೂ ಪ್ರಸಿದ್ಧ ಸಾಹಿತಿಗಳು, ಕಲಾವಿದರು ಬರೆದ ಇಲ್ಲಿನ ಲೇಖನಗಳು ಪಂಡಿತ್ ರಾಜೀವ ತಾರಾನಾಥರ ಪ್ರತಿಭೆಯ ಅನಾವರಣವನ್ನು ಮಾಡುತ್ತವೆ.
Height
0 CMS
Weight
900 GMS
Length
0 CMS
Width
0 CMS
Author
Sumangala
Publisher
Ankitha Pusthaka
Language
Kannada