Quantity
Product Description
ಓ, ನನ್ನ ಉದ್ದಕಿವಿಯ ಮುದ್ದುಪ್ರಾಣಿ, ನನಗೊಂದೇ ಬಯಕೆ, ನಿನ್ನ ಜೀವದ ಕಣಕಣವೂ ಸಮಗ್ರವಾಗಿ ಬೆಳೆಯಬೇಕು. ಮಹತ್ತಮವಾಗಿ ಪರಿವರಿತವಾಗಬೇಕು. ನಾವು ಬಯಸಿದ್ದೆಲ್ಲ ನಮ್ಮನ್ನು ಬೆಳೆಸಲಿಕ್ಕಿಲ್ಲ. ಬಯಕೆ ಬೆಳವಣಿಗೆಗೆ ಬೆನ್ನು ಗಾಳಿ, ಸರಿಯೇ. ಆದರೆ ಏನು ಬಯಸಬೇಕು? ಯಾರು ತೀರಾನಿಸಬೇಕು?
ಹುಚ್ಚಿ, ನಾನಿಲ್ಲದಿದ್ದರೂ ನೀನು ಇರುತ್ತೀ, ನಡೆಯುತ್ತಿ, ನವೆಯುತ್ತೀ, ನಲಿಯುತ್ತೀ. ನಾನು ನಿನಗಾಗಿ ನಿನ್ನ ಹತ್ತಿರ ಬಂದಿಲ್ಲ. ನನಗಾಗಿ ಬಂದಿದ್ದೇನೆ. ನನಗೆ ಭಾರವಾದದ್ದನ್ನು ನಿನಗೆ ಕೊಟ್ಟು ಹಗುರಾಗುವ ಕೆಟ್ಟ ಬಯಕೆ. ನನ್ನದನ್ನು ನಿನ್ನ ಪಾಲಿಗೆ ತೊಡಿಸಿದರೆ ನಿನಗೂ ನಡೆ ಸುಗಮ.
ನಿನ್ನ ಕಾಲಮುಂದೆಯೆ ಅದೊಂದು ಪ್ರಶಸ್ತವಾದ ಹಾದಿ ಇದೆ. ಯಾರು ನಡೆದಿದ್ದಾರೆ ಎಂದು ಶಂಕಿಸಬೇಡ. ನಡೆದವರ ಬದುಕು ಕೆಟ್ಟಿದೆ ಎಂದು ಮುಖ ಕಹಿಮಾಡಬೇಡ. ಯಾರು ನಡೆದು ಏನು ಪಡೆದಿದ್ದಾರೆ ಎಂಬುದನ್ನು ಕಟ್ಟಿಕೊಂಡು ಏನು ಮಾಡುತ್ತೀ? ಎದುರಿಸಿ, ತುಳಿದು ಮುಂದುವರಿಯಬೇಕು. ಎಂಬಲ್ಲಿಗೆ.....
Binding
Soft Bound
Author
Dr Veena Bannanje
ISBN-13
9788197852647
Number of Pages
128
Publisher
Saahitya Prakashana (Hubbali)
Publication Year
2025
Length
22 CMS
Weight
300 GMS
Language
Kannada