Select Size
Quantity
Product Description
565ರಲ್ಲಿ ನಡೆದ ತಾಳಿಕೋಟೆ (ರಕ್ಕಸ ತಂಗಡಿ) ಯುದ್ಧದ ನಂತರ ನೆಲೆ ಕಳೆದುಕೊಂಡ ಕನ್ನಡಿಗರು 19ನೆಯ ಶತಮಾನದ ಹೊತ್ತಿಗೆ ಐದು ಪ್ರಾಂತ್ಯಗಳು 17 ಸಂಸ್ಥಾನಗಳಲ್ಲಿ ಹರಿದು ಹಂಚಿಹೋಗಿದ್ದರು. ಶತಮಾನದ ಹೋರಾಟದ ಫಲವಾಗಿ ಈ ಭಾಗಗಳು ಸೇರಿಕೊಂಡು 1956ರಲ್ಲಿ 'ವಿಶಾಲ ಮೈಸೂರು ರಾಜ್ಯ' ರಚನೆಯಾಗಿ, ಕನ್ನಡಿಗರನ್ನು ಒಂದು ಆಡಳಿತದಲ್ಲಿ ತರುವ ಹಿರಿಯರ ಶತಮಾನದ ಕನಸು ನನಸಾಯಿತು. ಕರ್ನಾಟಕ ಎಂಬ ಹೆಸರಿಗಾಗಿ 1973ರವರೆಗೆ ಅಂದರೆ ಸುಮಾರು 17 ವರ್ಷಗಳನ್ನು ಕಾಯಬೇಕಾಯಿತು.
1956 ನವೆಂಬರ್ 1ರಂದು ಅಸ್ತಿತ್ವಕ್ಕೆ ಬಂದ ಈ ಕನ್ನಡ ನಾಡು ಅನಾಯಾಸವಾಗಿ ಬಂದಿದ್ದಲ್ಲ. ಕನ್ನಡ ಕಟ್ಟುವ ಕಾಯಕದಲ್ಲಿ ತಮ್ಮ ಬದುಕನ್ನು ಕಳೆದುಕೊಂಡವರ ತ್ಯಾಗದ ಉಡುಗೊರೆ ನಮ್ಮ ಇಂದಿನ ಕರ್ನಾಟಕ, ಇಂದಿನ ಕರ್ನಾಟಕದ ಹುಟ್ಟಿನ ಹಿಂದೆ ಶತಮಾನಗಳ ದಿಟ್ಟ ಹೋರಾಟದ ಕಥೆಯಿದೆ. ಅಕ್ಷರಶಃ ಸಾವಿರಾರು ಕನ್ನಡಿಗರ ತ್ಯಾಗ, ಒಗ್ಗಟ್ಟು ಹಾಗೂ ಛಲಬಿಡದ ತ್ರಿವಿಕ್ರಮನಂತೆ ನಡೆಸಿದ ಹೋರಾಟ ಅನುಪಮವಾದದ್ದು. ಏಕೀಕೃತ ಕರ್ನಾಟಕದ ಕನಸು ಕಂಡು ನನಸಾಗಿಸುವಲ್ಲಿ ಆ ಹಿರಿಯರ ಸಂಕಲ್ಪಶಕ್ತಿ, ನಮ್ಮ ಯುವ ಜನತೆಗೆ ಕನ್ನಡ ಕೆಲಸ ಮಾಡಲು ಸ್ಫೂರ್ತಿಯಾಗುವುದರಲ್ಲಿ ಅನುಮಾನವಿಲ್ಲ.
Weight
200 GMS
Length
22 CMS
Width
14 CMS
Height
2 CMS
Author
Nidasale Puttaswamaiah
Publisher
Sapna Book House Pvt Ltd
Publication Year
2022
Number of Pages
120
ISBN-13
9789354562464
Binding
Soft Bound
Language
Kannada