Quantity
Product Description
ಯಂತ್ರ ಕಥೆ ಯಂತ್ರ ಸಾಧನಗಳ ಉಗಮ, ಇತಿಹಾಸ ಹಾಗೂ ದೈನಂದಿನ ಬದುಕಿನಲ್ಲಿ ಅವುಗಳ ಪಾತ್ರವನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಒಂದು ಪ್ರಯತ್ನ. ವಿಜ್ಞಾನದ ಪ್ರಗತಿಯಲ್ಲಿ ಯಂತ್ರಗಳ ಪಾತ್ರ ಮಹತ್ತರ. ಪ್ರತಿಯೊಂದು ಯಂತ್ರವೂ ವಿಕಾಸದ ಹಾದಿಯಲ್ಲಿ ತನ್ನ ವಿಶಿಷ್ಟ ಕೊಡುಗೆ ನೀಡಿದೆ. ಯಂತ್ರೋಪಜೀವಿ ಮಾನವನಿಗೆ ಈ ಪರಂಪರೆಯ ಅಧ್ಯಯನ ಅನಿವಾರ್ಯ, ಲಾಭದಾಯಕ.
ಈ ಪುಸ್ತಕದ ಲೇಖಕರಾದ ಶ್ರೀ ಎಂ. ಶಿವಕುಮಾರ್ ಸ್ವತಃ ಯಂತ್ರ ವಿಜ್ಞಾನದಲ್ಲಿ ವಿಶೇಷ ಪರಿಣತಿ ಹೊಂದಿರುವವರು, ಹಲವು ಯಂತ್ರ ಹತಾರಗಳ ವಿನ್ಯಾಸಕ್ಕೆ, ನಿರ್ಮಾಣಕ್ಕೆ ಕಾರಣ ಪುರುಷರು. ವೃತ್ತಿಯಲ್ಲಿ ಇಂಜಿನಿಯರ್, ಪ್ರವೃತ್ತಿಯಲ್ಲಿ ಸಾಹಿತಿಯಾಗಿರುವ ಲೇಖಕರ ಈ ಕೃತಿ ವಿಜ್ಞಾನ ವಿಷಯಕ್ಕೆ ಸಾಹಿತ್ಯದ ಮೆರುಗನ್ನು ಪಡೆದಿದ್ದು, ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಪ್ರಥಮ ಪ್ರಶಸ್ತಿ ಪಡೆದ ಪುಸ್ತಕವಾಗಿದೆ.
Binding
Soft Bound
ISBN-13
9789395129619
Publisher
Kadamba Prakashana
Publication Year
2025
Author
M Shivakumar
Number of Pages
118
Height
2 CMS
Length
22 CMS
Weight
200 GMS
Width
14 CMS
Language
Kannada