Quantity
Product Description
ಇದು ಟರ್ಕಿಶ್ ನುಡಿಯಲ್ಲಿ ಹೊರಬಂದ 'ಹತಿರಾಲರಿಮ್' ಎಂಬ ಕುರ್ದಿಶ್ ನುಡಿ ಹೋರಾಟಗಾರ 'ಮೂಸಾ ಆಂಟೆರ್'ರವರ ಬದುಕಿನ ಕುರಿತಾದ ನೆನಪುಗಳ ಹೊತ್ತಗೆಯ ಕನ್ನಡ ನುಡಿಮಾರ್ಪು. ಟರ್ಕಿಯಲ್ಲಿ ನೆಲೆಸಿರುವ ಸುಮಾರು ೨೦ ಮಿಲಿಯನ್ ಕುರ್ದಿಶ್ ಮಂದಿಯ ನೆಲೆಪಾಡು ತುಂಬಾ ಕೆಟ್ಟದಾಗಿದೆ. ಅವರ ಮೇಲೆ ಎಣಿಕೆಯಿಲ್ಲದಶ್ಟು ದಬ್ಬಾಳಿಕೆಗಳು ನಡೆಯುತ್ತಿವೆ. ಅವರ ತಾಯ್ನುಡಿಯಾದ ಕುರ್ದಿಶ್ ಅನ್ನು ಮನೆಯಿಂದ ಹೊರಗೆ ಎಲ್ಲಿಯೂ ಬಳಸುವಂತಿಲ್ಲ. ಕುರ್ದಿಶ್ ಸುದ್ದಿಹಾಳೆಗಳನ್ನೋ , ಹೊತ್ತಗೆಗಳನ್ನೋ ಹೊರ ತರುವಂತಿಲ್ಲ! ಇಂತಹ ಉಸಿರುಗಟ್ಟಿದ ನೆಲೆಯಲ್ಲಿ ಬದುಕುತ್ತಿರುವ ಅವರ ನೋವನ್ನು ಬರಹಗಾರರು ಓದುಗರ ಮುಂದಿಡುವುದರೊಂದಿಗೆ 'ಮೂಸಾ'ರವರ ಹೋರಾಟದ ಹಾದಿ ಎಶ್ಟು ತೊಡಕಿನದಾಗಿತ್ತು ಅನ್ನುವುದನ್ನು ಎಳೆ ಎಳೆಯಾಗಿ ಬಿಡಿಸಿದಲಾಗಿದೆ. ಈಗಾಗಲೇ ನಾಲ್ಕು ಹೊತ್ತಗೆಗಳನ್ನು ಬರೆದಿರುವ ಶ್ರೀಪತಿ ಗೋಗಡಿಗೆಯವರು ಇದನ್ನು ಅಪ್ಪಟ ಕನ್ನಡದಲ್ಲಿ, ಅಂದರೆ ಯಾವುದೇ ತತ್ಸಮ, ತದ್ಬವ ಪದಗಳನ್ನು ಬಳಸದೇ ಬರೆದಿದ್ದಾರೆ.
Author
Shreepathi Gogadige
Binding
Soft Bound
Publication Year
2025
Publisher
Pisumathu Enterprises
Number of Pages
261
ISBN-13
9789334285987
Length
22 CMS
Weight
500 GMS
Width
14 CMS
Height
2 CMS
Language
Kannada