Quantity
Product Description
ಒಬ್ಬ ರಾಜಕಾರಣಿಯಾಗಿಯೂ, ಹಲವು ಬಾರಿ ಸದನದಲ್ಲಿ ಭಾಗವಹಿಸಿದ ಸಿದ್ಧಲಿಂಗಯ್ಯನವರಿಗೆ ವಿಶೇಷ ಬಗೆಯ ವ್ಯಕ್ತಿತ್ವವಿದೆ. ಅದು ಸಾಂಸ್ಕೃತಿಕ, ಸಾಹಿತ್ಯಕ ಹೃದಯಸ್ಪಂದನೆಯನ್ನೊಳಗೊಂಡ ರಾಜಕೀಯ ಎಚ್ಚರದ ವ್ಯಕ್ತಿತ್ವ. ಹೀಗಾಗಿ ಸದನದಲ್ಲಿ ಅವರು ಮಾತನಾಡುತ್ತಾರೆಂದರೆ ಅದು ಸಮಸ್ಯೆಗಳನ್ನು ಗಂಭೀರವಾಗಿ ತಲಸ್ಪರ್ಶಿಯಾಗಿ ವಿಶ್ಲೇಷಿಸಿದ ಮಾತುಗಳೇ ಆಗಿರುತ್ತಿದ್ದವು. ಜೊತೆಗೆ ಅವರು ಎತ್ತಿಕೊಂಡಿರುವ ಸಮಸ್ಯೆಗಳೂ ಕೂಡ ವಂಚಿತ ಸಮುದಾಯಗಳ ಶೋಷಿತರ ಬದುಕಿನ ಕಿತ್ತುತ್ತಿನ್ನುವ ಸಮಸ್ಯೆಗಳೇ ಆಗಿರುತ್ತಿದ್ದವು. ಮಹಿಳೆಯರು, ಮಕ್ಕಳು, ಅವಮಾನಿತರು, ಹಸಿದವರು, ತೃತೀಯ ಲಿಂಗಿಗಳು, ದಮನಿತರು ಹೀಗೆ ಹಲವು ವರ್ಗ ಮೂಲದ ಸಮಸ್ಯೆಗಳನ್ನು ಎತ್ತಿಕೊಂಡು ಪ್ರಶ್ನೆ ಮಾಡುತ್ತಾರೆ. ಸಿದ್ಧಲಿಂಗಯ್ಯನವರ ಮತ್ತೊಂದು ವಿಶೇಷತೆಯೆಂದರೆ ತೆಳುವಾದ ಹಾಸ್ಯದೊಂದಿಗೆ ಸಮಸ್ಯೆಯನ್ನು ಮಂಡಿಸುತ್ತ ಸದನವನ್ನು ಲವಲವಿಕೆಯಲ್ಲಿಟ್ಟು ಸಮಸ್ಯೆಯನ್ನು ಗಂಭೀರವಾಗಿ ಚಿಂತಿಸುವಂತೆ ಮಾಡುವುದು. ಸದನದೊಳಗೆ ಅವರು ಎತ್ತಿರುವ ಹಲವು ಪ್ರಶ್ನೆಗಳನ್ನು ಸರ್ಕಾರ ಅವುಗಳನ್ನು ಗಂಭೀರವಾಗಿ ಪರಿಗಣಿಸಿ ನೀಡಿರುವ ಪರಿಹಾರ ರೂಪದ ಯೋಜನೆಗಳು ಅವರ ಕ್ರಿಯಾಶೀಲತೆಗೆ ಹಿಡಿದ ಕನ್ನಡಿ ರೂಪದ ಘಟನೆಗಳಾಗಿವೆ.
Author
Dr Siddalingaiah
Binding
Soft Bound
Number of Pages
744
Publication Year
2018
Publisher
Kannada Pusthaka Praadhikaara
Height
7 CMS
Length
22 CMS
Weight
1000 GMS
Width
14 CMS
Language
Kannada