Product Description
ಅಂಧಶ್ರದ್ಧೆಯೆಂದರೆ ಬೌದ್ಧಿಕ ದಾರಿದ್ರ್ಯದ ಫಲವಾಗಿ ನಮ್ಮನ್ನು ಡೋಲಾಯಮನ ಸ್ಥಿತಿಯಲ್ಲಿರಿಸುವ ಒಂದು ಮನೋದೌರ್ಬಲ್ಯದ ಸ್ಥಿತಿ. ಬಾಲ್ಯದಿಂದಲೇ ಸಂಸ್ಕಾರಗೊಂಡ ಮನಸ್ಸಿಗೆ ಸಾಮಾಜಿಕ ಕಟ್ಟಳೆಗಳನ್ನು ಮೀರುವ ಧೈರ್ಯವಿಲ್ಲದೆ ನಮ್ಮಿಂದ ಪಲಾಯನ ಸೂತ್ರ ಕೈಗೊಳ್ಳುವ ವೈಚಾರಿಕ ಬುದ್ಧಿ ನಮ್ಮನ್ನು ವಿಚಲಿತನನ್ನಾಗಿ ಮಾಡುತದೆ. ನಮ್ಮಲ್ಲಿ ಬೇರು ಬಿಟ್ಟ ಎಲ್ಲ ಕುರುಡು ನಂಬಿಕೆಗಳಿಗೂ ಇದೇ ಮೂಲ. ಯಾರೋ ಹೇಳಿದ್ದನ್ನು ಮಾಡಿನೋಡುವ ಕುತೂಹಲ, ಉತ್ಸುಕತೆಗಿಂತ ತನಗೆ ಅನಿಸಿದ್ದನ್ನು ಮಾಡುವ ಧೈರ್ಯ ಬಂದಾಗ ಮೂಢನಂಬಿಕೆಗಳು ನಮ್ಮಿಂದ ತೊಲಗಿ ಹೋಗಬಹುದೇನೋ! ನಮ್ಮ ದೈನಂದಿನ ಆಗುಹೋಗುಗಳಿಗೆ ವಿಧಿ-ಗ್ರಹಗತಿಗಳೇ ಕಾರಣವೆಂದು ನಮ್ಮ ಮನಸ್ಸಿಗೆ ನಾಟುವಂತೆ ಹೇಳಿದ್ದರ ಪರಿಣಾಮವೇ ಇದಾಗಿದೆ. ಜನರಲ್ಲಿ ಉಳಿದುಕೊಂಡ ಅಂಧಶ್ರದ್ಧೆ ಇಂದು ಸಮಾಜದಲ್ಲಿ ಮಾಡುವ ಹಾವಳಿ ಅಷ್ಟಿಷ್ಟಲ್ಲ. ಅವನ್ನೆಲ್ಲ ಮುಂದಿರಿಸಿ ಪ್ರಶ್ನೋತ್ತರ ರೂಪದಲ್ಲಿ ಗಮನ ಸೆಳೆದು ಬೌದ್ಧಿಕ ಚಿಂತನೆಯನ್ನು ಹೆಚ್ಚು ಮಾಡುವಲ್ಲಿ ಈ ಕೃತಿ ಉಪಯುಕ್ತ.