Product Description
ಗಣಿತದಂತಹ ಅಮೂರ್ತ ವಿಷಯಗಳು ಮಹಿಳೆಯರ ಶಕ್ತಿಗೆ ಮೀರಿದ್ದು ಎಂದು ಎಲ್ಲರೂ ನಂಬಿದ್ದರು. ಈ ಎಲ್ಲಾ ಅಡೆತಡೆಗಳನ್ನು ದಾಟಿ ಅನೇಕ ಪ್ರತಿಷ್ಠಿತ ಮಹಿಳಾ ಗಣಿತಜ್ಞರು ಮಹತ್ತರವಾದ ಸಂಶೋಧನೆಗಳನ್ನು ಮಾಡಿ ಒಂದು ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಥಿಯಾನೊ, ಹೈಪಾಶಿಯಾ, ಮರಿಯಾ ಅಗ್ನೇಸಿ, ಸೋಫಿ ಜರ್ಮೇನ್, ಸೋನಿಯಾ ಕೊವಲೆವಿಸ್ಕಯ, ಎಮ್ಮಿ ನಾಯ್ಥರ್, ಇವರೆಲ್ಲರೂ ಇತಿಹಾಸದ ಪುಟಗಳಲ್ಲಿ ಗಣಿತದ ದಂತಕಥೆಗಳಾಗಿ ಉಳಿದಿದ್ದಾರೆ. ಗಣಿತದ ನಿಯತಕಾಲಿಕೆಗಳಲ್ಲಿ Ladies Diary ಹೆಚ್ಚು ಜನಪ್ರಿಯವಾಗಿದ್ದಲ್ಲದೆ ಮಹಿಳೆಯರಿಗೆ ಗಣಿತದ ಸೌಂದರ್ಯವನ್ನು ಸವಿಯಲು ಉತ್ತೇಜಿಸುತ್ತಿತ್ತು. ಕ್ರಿ.ಶ. 17 ಮತ್ತು 18ನೇ ಶತಮಾನದ ವೇಳೆಗೆ ವಿದ್ಯಾಭ್ಯಾಸ ಮಾಡುವ ಮಹಿಳೆಯರಿಗೆ ಮತ್ತಷ್ಟು ಪ್ರೋತ್ಸಾಹ ದೊರೆಯಿತು. ಈ ಕೃತಿಯಲ್ಲಿ ಮಹಿಳೆಯರ ವಿದ್ಯಾಭ್ಯಾಸಕ್ಕೆ ಆಗುತ್ತಿದ್ದ ತೊಂದರೆಗಳನ್ನು ಸಹ ವಿವರಿಸಲಾಗಿದೆ. ಶಿಲಾಯುಗದಲ್ಲಿ ಅನೇಕ ಸಂಖ್ಯಾ ಪದ್ಧತಿಗಳು ಇದ್ದವು ಎಂಬುದಕ್ಕೆ ಸಾಕಷ್ಟು ಅಧಾರಗಳನ್ನಿಲ್ಲಿ ನೀಡಿದೆ.