Quantity
Product Description
ಇಂಗ್ಲಿಷ್ ಪ್ರಾಧ್ಯಾಪಕರಾಗಿಯೂ ಕನ್ನಡ ಸಾಹಿತ್ಯವನ್ನು ಆಸಕ್ತಿಯಿಂದ ಆಳವಾಗಿ ಅಧ್ಯಯನ ಮಾಡಿ ಬೆಲೆಯುಳ್ಳ ಕೃತಿಗಳನ್ನು ರಚಿಸಿದವರಲ್ಲಿ, ಅತ್ಯುತ್ತಮ ಅನುವಾದ ಮಾಡಿದವರಲ್ಲಿ ಬಿ.ಎಂ.ಶ್ರೀ. ಮೊದಲಿಗರು. ಆ ಪರಂಪರೆಯನ್ನು ಮುಂದುವರಿಸುತ್ತ ಬಂದ ಗಟ್ಟಿಗರು ಹಲವರು, ಅಂಥವರಲ್ಲಿ ಒಬ್ಬರಾಗಿ ನೈಷಧಂ ಎಸ್ಸೆ. ವಿಸ್ಮಯಭರಿತವೂ ಕುತೂಹಲಕಾರಿಯೂ ಆದ ಚೀನಾದೇಶದ 20 ದೌರ್ ಜನಪದ ಕತೆಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಒಂದು ಜನಾಂಗದ ಸಾಂಸ್ಕೃತಿಕ ಹಿರಿಮೆ ಸಾವಿರಾರು ವರ್ಷಗಳಿಂದ ಮೌಖಿಕ ರೂಪದಲ್ಲಿ ಹರಿದುಬಂದಿರುವ ಜನಪದ ಸಾಹಿತ್ಯದಲ್ಲಿರುತ್ತದೆ. ಮಿಥ್ಗಳನ್ನು ಒಳಗೊಂಡಿರುವ ಜನಪದ ಕಥೆಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದರೆ ಅದನ್ನು ಕಟ್ಟಿದವರ ಮತ್ತು ಬೆಳೆಸುತ್ತ ಬಂದವರ ಸಾಮಾಜಿಕ ಜೀವನ, ಧಾರ್ಮಿಕ ನಂಬಿಕೆಗಳು, ಕಲಾಕೌಶಲ, ಕನಸು-ಕಲ್ಪನೆ ಸೊಗಸಾಗಿ ನಮ್ಮೆದುರು ಕಂಗೊಳಿಸುತ್ತವೆ.
ಮಾರ್ಕ್ ಬೆಂಡರ್ ಮತ್ತು ಸುಹುಆನ ಚೀನಾ ದೇಶದ ದೌರ್ ಜನಪದ ಕತೆಗಳನ್ನು ಇಂಗ್ಲಿಷ್ಗೆ ತಂದದ್ದು 1983ರಲ್ಲಿ. ಚೀನಾ ದೇಶದ ಒಂದು ಬಲಿಷ್ಠ ರಾಷ್ಟ್ರೀಯತೆಯನ್ನು ಪ್ರತಿನಿಧಿಸುವ ದೌರ್ ಜನಾಂಗ ಅಲ್ಪಸಂಖ್ಯಾತವಾದರೂ ಸಾಂಸ್ಕೃತಿಕ ಅಸ್ಮಿತೆಯನ್ನು ಔನ್ನತ್ಯವನ್ನು, ಸಮೃದ್ಧಿಯನ್ನು ಉಳಿಸಿಕೊಂಡಿರುವುದನ್ನು ಒಂದೊಂದು ಕಥೆಯೂ ಸಾಕ್ಷೀಕರಿಸುವಂತಿವೆ. ಜನಸಾಮಾನ್ಯರ ವಿಶಿಷ್ಟ ಮಾತುಗಾರಿಕೆಯ ಭಾಷಾಭಿವ್ಯಕ್ತಿಯಾದ ಜನಪದ ಸಾಹಿತ್ಯದ ಯಾವುದೇ ಪ್ರಕಾರವನ್ನಾದರೂ ಅವರ ಸ್ವಂತಿಕೆ, ತಾಜಾತನ ಕೆಡದಂತೆ ಇನ್ನೊಂದು ಭಾಷೆಗೆ ತರುವುದು ಅಷ್ಟು ಸುಲಭವಲ್ಲ. ಆದರೆ ಚೀನಾ ದೇಶದ ಬುಡಕಟ್ಟುಗಳ ಬಗೆಗೆ ಅಧ್ಯಯನ ಮಾಡಿರುವುದರಿಂದ, ಭಾಷಾಂತರದಲ್ಲಿ ಕೈ ಪಳಗಿಸಿಕೊಂಡಿರುವುದರಿಂದ, ನೈಷಧಂ ಮೂಲದ ಅನುಭವವನ್ನು ಓದುಗರು ದಕ್ಕಿಸಿಕೊಳ್ಳುವಂತೆ ಸುಲಲಿತವಾಗಿ ಕಥೆಗಳನ್ನು ಭಾಷಾಂತರಿಸಿದ್ದಾರೆ. ಅವರಿಗೆ ಅಭಿನಂದನೆಗಳು.
-ಡಾ. ಬೈರಮಂಗಲ ರಾಮೇಗೌಡ
Author
Nyshadam S A
Binding
Soft Bound
Number of Pages
208
Publication Year
2026
Publisher
Veeraloka Books Pvt Ltd
Height
2 CMS
Length
22 CMS
Weight
300 GMS
Width
14 CMS
Language
Kannada