Quantity
Product Description
ಸಮಾಜವನ್ನು ಎರಡು ಬಗೆಯಿಂದ ನೋಡಬಹುದು. ಒಂದು ಮೇಲ್ನೋಟಕ್ಕೆ, ಮತ್ತೊಂದು ಒಳಗೊಕ್ಕಿ ನೋಡುವುದು. ಮೇಲ್ನೋಟದಲ್ಲಿ ಕಾಣುವುದು ಸಹಜವಾಗಿರುತ್ತದೆ. ಆದರೆ ಒಳಗೊಕ್ಕಿ ಸಮಾಜದ ವಾಸ್ತವತೆ ಅರಿಯುವುದು ಅಷ್ಟು ಸುಲಭದ ಕೆಲಸವಲ್ಲ. ಅಂತಹ ಸಾಹಸವನ್ನು ಯುವ ಸಾಹಿತಿ ರಾಮಕೃಷ್ಣ. ಎನ್ ಅವರು ಮಾಡಿದ್ದಾರೆ. ಸಹೃದಯರ ಏಕಾಗ್ರತೆಯನ್ನು ಹಿಡಿದಿಟ್ಟುಕೊಳ್ಳುವ ಜೊತೆಗೆ ಉತ್ತಮವಾದ ಹಲವಾರು ಸಂದೇಶಗಳನ್ನು ಈ ಬರಹ ನೀಡುತ್ತದೆ.
ಹಳ್ಳಿಯ ಸೊಗಡು, ನಗರದ ಯಾಂತ್ರಿಕ ಜನ ಜೀವನ ಹಾಗೂ ಮಾನವರಲ್ಲಿರುವ ಮೌಡ್ಯಗಳಿಂದ ಈ ಬರಹ ಕೂಡಿದೆ. ನೈತಿಕತೆಯ ಬದುಕಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ನಮ್ಮವರು ನಮ್ಮವರಲ್ಲ. ನಂಬಿದವರೆಲ್ಲ ನಮ್ಮವರಲ್ಲ. ಜೊತೆಗಿದ್ದವರೆಲ್ಲ ನಮ್ಮೊಂದಿಗೆ ಇರುವುದಿಲ್ಲ. ಹಾಗಂತ ಎಲ್ಲರೂ ನಮ್ಮಿಂದ ದೂರ ಹೋಗುವುದಿಲ್ಲ. ಎಂಬ ಸತ್ಯಾಂಶವನ್ನು ಈ ಬರಹ ತಿಳಿಸುತ್ತದೆ.
ಹೊಸ ಬಗೆಯ ಚಿಂತನೆಗಳಿಂದ ಸಾಹಿತ್ಯ ಬೆಳವಣಿಗೆಯಾಗುತ್ತದೆ. ಎಂಬುದಕ್ಕೆ ಈ ಬರಹ ನಿದರ್ಶನವಾಗಿದೆ.
Author
N Rama Krishna
Binding
Soft Bound
Number of Pages
184
Publication Year
2025
Publisher
Kadamba Prakashana
Height
2 CMS
Length
10 CMS
Weight
300 GMS
Width
14 CMS
Language
Kannada