Product Description
ಹೊಸತಾಗಿ ಪತ್ರಿಕೋದ್ಯಮಕ್ಕೆ ಕಾಲಿಡುತ್ತಿರುವ ಹಾಗೂ ಕೆಲ ಕಾಲ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿರುವವರು ತಿಳಿಯಲೇಬೇಕಾದ, ಕಲಿಯಲೇಬೇಕಾದ ಅನೇಕ ಅನಿವಾರ್ಯತೆಗಳು ಇಂದು ನಿರ್ಮಾಣವಾಗಿವೆ. ಈ ಹಿನ್ನೆಲೆಯನ್ನು ಇಟ್ಟುಕೊಂಡೇ ನಾನು ವಿವಿಧ ಗ್ರಂಥಗಳನ್ನು ಆಧರಿಸಿ ಕೇವಲ ಸಂದರ್ಶನ ನಡೆಸುವ ಕಲೆಯ ಕುರಿತು ಒಂದು ಗ್ರಂಥವನ್ನು ಏಕೆ ಬರೆಯಬಾರದು? ಎಂದು ನನ್ನಲ್ಲೇ ಕೇಳಿಕೊಂಡು ಯುವ ಪತ್ರಕರ್ತರು ಹಾಗೂ ಪತ್ರಿಕೋದ್ಯಮದ ವಿದ್ಯಾರ್ಥಿಗಳನ್ನು ಮನದಲ್ಲಿ ಇಟ್ಟುಕೊಂಡು, ಜತೆಗೆ ಪತ್ರಿಕೋದ್ಯಮದಲ್ಲಿ ನಾನು ಗಳಿಸಿದ 33 ವರ್ಷಗಳ ಅನುಭವ ಹಾಗೂ ನಡೆಸಿದ ಸಂದರ್ಶನಗಳನ್ನು ಆಧಾರವಾಗಿಟ್ಟುಕೊಂಡು ಈ ಗ್ರಂಥವನ್ನು ರಚಿಸಿದ್ದೇನೆ. ಇದು ಉದಯೋನ್ಮುಖ ಪತ್ರಕರ್ತರಿಗೆ ಒಂದು ಮಾರ್ಗದರ್ಶಿಯಾದರೆ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪಠ್ಯವಾಗಿ ಇಲ್ಲವೇ ಆಕರ ಗ್ರಂಥವಾಗಿ ಪ್ರಯೋಜನವಾಗಬಹುದು ಎನ್ನುವುದು ನನ್ನ ಅಭಿಮತ.