Select Size
Quantity
Product Description
ಕುವೆಂಪು ಜೈವಿಕ ಧಾಮ, ಕವಿಮನೆ ಫೋಟೊ ಗ್ಯಾಲರಿ ಮುಂತಾದ ಪರಿಕಲ್ಪನೆಗಳಲ್ಲಿ ತೇಜಸ್ವಿ ಪಾತ್ರವೇನು? ಎಂಬುದನ್ನು ಮನಗಾಣಿಸುತ್ತಾ ಹೋಗುವ ಪ್ರಕಾಶ್ ಶೈಲಿಯಲ್ಲಿ ನಿರಹಂಕಾರವಿದೆ. ಎಲ್ಲವೂ ನನ್ನಿಂದಲೇ ಆಯಿತು ಎಂಬ ಗರ್ವರಸವಿಲ್ಲದ All Inclusive ದೃಷ್ಟಿ ಇಲ್ಲಿ ಎದ್ದು ಕಾಣುತ್ತದೆ. ಮರಣಮಂಚದಲ್ಲೂ ತೇಜಸ್ವಿ ಅವರ ನಗೆಚಾಟಿಕೆ, ವಿನೋದ ವಿಡಂಬನೆಗಳ ಮಾತುಕತೆ ವಿಷಾದರಮ್ಯವಾಗಿ ಮೂಡಿಬಂದಿದೆ.
ಅಣ್ಣಯ್ಯನಾದ ಶಾಮಣ್ಣನನ್ನು ಕುರಿತ ನಿರೂಪಣೆ ಸಹಜ ಸುಂದರವಾಗಿದೆ. ಭಗವತಿ ಕೆರೆಯ ಬಳಿ ಜಮೀನು ಖರೀದಿ ಮಾಡಿ, ಕೃಷಿಯಲ್ಲಿ ನಡೆಸುವ ಪ್ರಯೋಗಶೀಲತೆ, ಶಾಮಣ್ಣನವರ ಲಾಭರಹಿತ ವ್ಯವಸಾಯ ಮಾತ್ರವಲ್ಲದೆ ನಮ್ಮ ಕೃಷಿ ಮಾರುಕಟ್ಟೆಗಳ ಹಿಡುವಳಿತನ ಮತ್ತು ರೈತರ ಬದುಕಿನ ಬವಣೆಗಳ ಸಚಿತ್ರ ವರದಿಯಾಗಿದೆ. ಇದರ ಜೊತೆಗೆ ರೈತಸಂಘದ ಹೋರಾಟ, ಸಭೆಗಳು, ಚಳುವಳಿ ಇವೆಲ್ಲವುಗಳೊಂದಿಗೆ ಏಗುವ ತೇಜಸ್ವಿ, ಶಾಮಣ್ಣ, ಸುಂದರೇಶ್, ನಂಜುಂಡಸ್ವಾಮಿ ಅವರ ಸ್ನೇಹ ಮಿಲನದ ಲವಲವಿಕೆಯ ನಿರೂಪಣೆಯನ್ನು ಹತ್ತಿರದಿಂದ ಚೆನ್ನಾಗಿ ಬಲ್ಲ ಪ್ರಕಾಶ್ ಅಂಥವರು ಮಾತ್ರ ಬರೆಯಲು ಸಾಧ್ಯ!
ಅಣ್ಣಯ್ಯನಲ್ಲಿ (ಶಾಮಣ್ಣನಲ್ಲಿ) ಅಮ್ಮನನ್ನೂ ಅಮ್ಮನಲ್ಲಿ ಅಣ್ಣಯ್ಯನನ್ನೂ ಕಾಣುತ್ತಾ ಪ್ರಕಾಶ್ ನಿರೂಪಣೆ ಮಾಡಿರುವ ಪ್ರಸಂಗಗಳು ಹೃದಯಸ್ಪರ್ಶಿಯಾಗಿವೆ. ದೊಡ್ಡಣ್ಣನಾದ ಶಾಮಣ್ಣನ ಹೃದಯವಂತಿಕೆಯನ್ನು ಮನಗಾಣಿಸುವಲ್ಲಿ ಯಶಸ್ವಿಯಾಗಿರುವುದಲ್ಲದೆ ಅಣ್ಣತಮ್ಮಂದಿರ ಸೋದರಸ್ನೇಹದ ಸ್ಮಾರಕವೂ ಆಗಿದೆ.
ವಿ. ಚಂದ್ರಶೇಖರ ನಂಗಲಿ (ಮುನ್ನುಡಿಯಿಂದ)
Weight
300 GMS
Length
22 CMS
Height
1 CMS
Author
Kadidaalu K S Ramappagowda
Publisher
Abhiruchi Prakashana
Publication Year
2023
Number of Pages
130
Binding
Soft Bound
Language
Kannada