Product Description
ಭಾರತದ ಭೂಪಟದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಇರುವ ರೀತಿಯೇ ವಿಚಿತ್ರ. ಜೇನುಹುಟ್ಟಿನಂತೆ ಇಳಿಬಿದ್ದಿರುವ ಅದರ ಮೂರುಕಡೆ ಆಕಾಶವನ್ನೇ ಕಿತ್ತು ತಿಂದು ಹಾಸಿದಂತಿರುವ ನೀಲಕಡಲು, ಇದರೊಳಗೆ ಮಕ್ಕಳಾಟದ ಕಲ್ಲ ಹರಳುಗಳಂತೆ ಸಾವಿರ ಕಿ.ಮೀ. ಉದ್ದಕ್ಕೆ ಚೆಲ್ಲಿಕೊಂಡಿರುವ ಮಣ್ಣದಿಬ್ಬಗಳು. ಅಪಾರ ಜಲರಾಶಿಯಲ್ಲಿ, ಒಂದು ಭಾರೀ ಅಲೆ ಎದ್ದುಬಂದರೆ ಮುಳುಗಿಬಿಡುವಂತೆ ತೋರುವ ಇವು ಕರಗದೆ ಹೇಗಾದರೂ ಉಳಿದಿವೆಯೋ ಎಂದು ಸೋಜಿಗವಾಗುತ್ತದೆ; ದೊಡ್ಡ ದೇಶದ ಸಹವಾಸವೇ ಬೇಡ ಎಂದು ಕಡಲೊಳಗೆ ಧೀಮಂತವಾಗಿ ನಿಂತಿರುವ ಪರಿ ಅದರ ಹುಟ್ಟಿಸುತ್ತದೆ. ಮೇಲಿನಂತೆ ತಮ್ಮ ವಿಶಿಷ್ಟ ಗದ್ಯದ ಮೂಲಕ ಮೊದಲಿಗೇ ಓದುಗರಿಗೆ ಮೋಡಿ ಮಾಡುತ್ತಾರೆ ಲೇಖಕರು. ಇನ್ನು ಬಿಡುಗಡೆ ಇಲ್ಲ. ಅಂಡಮಾನಿನ ನೆಲ ಜಲವನ್ನು, ಅಲ್ಲಿ ಬದುಕುತ್ತಿರುವ ಮನುಷ್ಯರನ್ನು, ಪ್ರಾಣಿ ಪಕ್ಷಿಗಳನ್ನು ಚಿಕಿತ್ಸಕ ದೃಷ್ಟಿಯಿಂದ ನೋಡುತ್ತ ಓದುಗರಲ್ಲಿ ಆಸಕ್ತಿ ಮೂಡಿಸುತ್ತಾರೆ. ಈ ದೃಷ್ಟಿಯಿಂದ ‘ಅಂಡಮಾನ್ ಕನಸು’ ಒಂದು ವಿಶಿಷ್ಟ ರೀತಿಯ ಪ್ರವಾಸ ಕಥನ.