Quantity
Product Description
ಮುವ್ವತ್ತು ವರ್ಷಗಳ ಹಿಂದೆ ಕಾಸರಗೋಡಿನಲ್ಲಿ ಆರಂಭವಾದ ಭೂಗತ ಬದುಕು ಅವನನ್ನು ಮುಂಬಯಿಯ ಮಲಬಾರ್ ಹಿಲ್ಪವರೆಗೂ ಹಂತ ಹಂತವಾಗಿ ಎಳೆದು ತಂದಿತ್ತು. ಏಳುಬೀಳುಗಳ ದರ್ಶನ ಮಾಡಿಸಿತ್ತು. ಮನುಷ್ಯನಾಗಿ ಮನುಷ್ಯರನ್ನು ಗಳಿಸಿದ್ದ. ಅಸೂಯೆ ಹುಟ್ಟಿಸಿದ್ದ. ಮೋಸ ಹೋಗಿದ್ದ. ಹಿತಶತ್ರುಗಳ ಸಂಚಿಗೆ ಬಲಿಯಾಗಿದ್ದ. ಮರುಹುಟ್ಟು ಪಡೆದಿದ್ದ. ಹಣ ಗಳಿಸಿದ್ದ. ನಂಬಿದವರನ್ನು ಆದರಿಸುವ ಔದಾರ್ಯ ತೋರಿದ್ದ. ಆದರೆ ಅವನಿಗೆ ಅರಿವಿಲ್ಲದಂತೆಯೇ ಕಾಲು ಜಾರಿದ್ದ. ಜೀವನದಲ್ಲಿ ಎರಡನೆಯ ಬಾರಿಗೆ ಏಕಾಂಗಿಯಾಗಿದ್ದ . . .ಅಪ್ಪ ಮನ್ಸೂಲ್ ಹಠಾತ್ತನೆ ಸತ್ತಾಗ ಅಬ್ದುಲ್ಲನ ವಯಸ್ಸು ಇಪ್ಪತ್ತೂರು ವರ್ಷ. ಈಗ ಐವತ್ತೂರು ಮುಂಬಯಿಯ ಭೂಗತ ಪ್ರಪಂಚಕ್ಕೆ ದಾರೂವಾಲನ ಹೆಸರು ಚಿರಪರಿಚಿತವಾಗಿತ್ತು. ಕೊಲೆ, ಸುಲಿಗೆ, ದ್ರೋಹಗಳನ್ನು ದೈನಿಕ ಕ್ರಿಯೆಗಳೆಂದು ಭಾವಿಸುತ್ತಿದ್ದ ಭೂಗತ ಪ್ರಪಂಚ ದಾರೂವಾಲನ ಬಗ್ಗೆ ತನ್ನದೇ ಗೌರವ ಹೊಂದಿತ್ತು. ಗೋವಾ ಜೈಲಿನಲ್ಲಿ ದಾರೂವಾಲ ಮೃತಪಟ್ಟ, ಅವನ ಸಾವಿಗೆ ಅವನೇ ಬೆಳಸಿದ್ದ ಅಬ್ದುಲ್ಲ ಕಾರಣ ಎಂಬ ಸುದ್ದಿ ಬಂದಾಗ ಅಮಾನುಷ ಪ್ರಪಂಚದಲ್ಲೂ ನೀತಿಯ ಸಂಚಾರವಾಗಿತ್ತು. ಅಬ್ದುಲ್ಲ ಅಬ್ದುಲ್ಲ ಅಸ್ಪಶ್ಯನಾಗಿದ್ದ. ಇದರಿಂದಾಗಿ ಅಬ್ದುಲ್ಲ ಅಬ್ದುಲ್ಲನಾಗೇ ದಾರೂವಾಲನ ಹೆಸರು ಹೇಳಿಕೊಂಡು ದಂಧೆ ಆರಂಭಿಸುವುದು ಅಸಾಧ್ಯದ ಮಾತಾಗಿತ್ತು. ಅಬ್ದುಲ್ಲ ಸಾಹಿದ್ ಹುಸೇನ್ ಆಗಿದ್ದ. ತನ್ನ ಮಾಲಿಗೆ ಮಾರುಕಟ್ಟೆ ಕುದುರಿಸಬಲ್ಲ ದಳ್ಳಾಳಿಗಾಗಿ ಶೋಧಿಸುತ್ತಾ ಧಾರಾವಿ ಕೊಳಚೆಗೇರಿಗೆ ಕಾಲಿಟ್ಟಿದ್ದ. ಸಮುದ್ರದಿಂದ ಮಾಲುತಂದು ಮಧ್ಯವರ್ತಿಗೆ ತಲುಪಿಸುವ ಸಮರ್ಥ ತಂಡವೊಂದರ ಮಾಸ್ಟರ್ ಜುಲ್ಟಿಕರ್ ಅಲಿಯಾಸ್ ಸಮುಂರ್ದ ಘೋಡಾನನ್ನು ಭೇಟಿ ಮಾಡಿದ್ದ. ತನ್ನಲ್ಲಿದ್ದ ಮಾಲಿನ ಬಗ್ಗೆ ವಿವರಣೆ ನೀಡಿದ್ದ. ನಗುತ್ತಲೇ ವಿವರಣೆ ಕೇಳಿದ್ದ ಸೈಂಧವ ಸ್ವರೂಪಿ ಜುಲ್ಟಿಕರ್"ಹುಸೇನ್ ಭಾಯ್, ಇವತ್ತು ನಿನ್ನ ಮಾಲಿಗೆ ಮಾರ್ಕೆಟ್ ಇಲ್ಲ. ಎಕ್ಟೋಸೀಮ್ಸ್, ಗನ್ನು ಹೆರಾಯಿನ್ ಇದ್ರೆ ಹೇಳು, ನಾಳೆ, ನಾಳೆ ಬೆಳಗಾಗೋವಷ್ಟರಲ್ಲಿ ನಿನ್ನ ನಸೀಬೇ ಬೇರೆ ಮಾಡ್ತೀನಿ"ಎಂದಿದ್ದ.
Author
K N Venkatasubba Rao
Binding
Soft Bound
Number of Pages
361
Publication Year
2025
Publisher
Kamadhenu Pustaka Bhavana
Height
3 CMS
Length
22 CMS
Weight
400 GMS
Width
14 CMS
Language
Kannada