Quantity
Product Description
ಪರಿಸರ ಪ್ರೇಮಿ, ಮಣ್ಣಿನ ವೈದ್ಯ, ಎರೆಹುಳು ಪೋಷಕ, ಸಾವಯವ ಗೊಬ್ಬರ ತಯಾರಕ, ಸಸ್ಯ ಮಿತ್ರ, ಸಾವಯವ ಕೃಷಿಕ, ಕೃಷಿ ಮಾರ್ಗದರ್ಶಕ, ಕೆಂಚಾಂಬೆ ದೇವಿ ಭಕ್ತ ಡಾ ವಿ.ಪಿ. ಹೆಗ್ಡೆಯವರು.
1939 ಡಿಸೆಂಬರ್ 27 ರಂದು ಹುಟ್ಟಿದ, 86 ವಸಂತ ಕಳೆದ ವಯೋವೃದ್ಧರಾದ, ಕೃಷಿ ಪಂಡಿತರಾದ ವಿ ಪಿ ಹೆಗ್ಡೆಯವರು ತಮ್ಮ ಜೀವನಾನುಭವದಿಂದ ಕಲಿತ ಪಾಠಗಳನ್ನು ವಿದ್ಯಾರ್ಥಿಗಳಿಗೆ, ಯುವ ಜನತೆಗೆ ಮತ್ತು ರೈತರಿಗೆ ಧಾರೆ ಎರೆಯಲು ಸದಾ ಸಿದ್ಧರಿರುವ 'ಸಿಪಾಯಿ'.
ಯೋಜಿತ ಸಾವಯವ ಕೃಷಿಯು ಮಣ್ಣಿನ ಸಂರಕ್ಷಣೆ, ರೈತರ ಹಿತ ರಕ್ಷಣೆ, ಬೆಳೆಗಳ ಪೋಷಣೆ, ಸೂಕ್ಷ್ಮಜೀವಾಣು ರಕ್ಷಣೆ, ಪರಿಸರ ಕ್ಷೇಮ ಚಿಂತನೆ, ಜನರ ಆರೋಗ್ಯ ರಕ್ಷಣೆ ಮತ್ತು ಕೃಷಿಕರಿಗೆ ಆದಾಯ ತಂದು ಕೊಡಬಲ್ಲ ಶಕ್ತಿಯನ್ನು ಹೊಂದಿದೆ.
"ಸ್ವಾರ್ಥ ಬಿಟ್ಟು ನಿಸ್ವಾರ್ಥವಾಗಿ ಭೂಮಿಗೆ, ಭೂಮಿ ತಾಯಿಗೆ ದ್ರೋಹ ಮಾಡದಂತೆ, ಯಾವುದೇ ರಾಸಾಯನಿಕ ವಿಷ ಬಳಸದೆ ತಾನೂ ಬೆಳೆದು, ಸುತ್ತಲ ಪರಿಸರವನ್ನು ಸ್ವಚ್ಛ ಸುಂದರವಾಗಿ ಇಟ್ಟುಕೊಂಡು ಬದುಕುವ ಸಾವಯವ ಕೃಷಿಕನ ಬದುಕು ಬಂಗಾರವಾಗುತ್ತದೆ. ಅವನು ಭೂಮಿ ತಾಯಿಯ ಚೊಚ್ಚಲ ಮಗ" ಎನ್ನುತ್ತಾರೆ ವಿ ಪಿ ಹೆಗ್ಡೆ.
ತೋಟಗಾರಿಕೆ ಬೆಳೆಗಳು, ಸಾಂಬಾರ ಬೆಳೆಗಳು, ಹೂವು ಬೆಳೆಗಳು ಮತ್ತು ಹಣ್ಣಿನ ಬೆಳೆಗಳನ್ನು ಬೆಳೆಸುವುದರ ಕುರಿತು ಪ್ರಾಯೋಗಿಕವಾಗಿ ತಾವು ಕಂಡುಂಡ ಅನುಭವಗಳ ಸರಮಾಲೆಯೇ ಡಾ ವಿ ಪಿ ಹೆಗ್ಡೆಯವರ "ಸಾವಯವ ಕೃಷಿ" ಕೃತಿಯಾಗಿದೆ.
ಭೂಮಿ ತಾಯಿಗೆ ವಿಷ ಉಣಿಸುತ್ತಿರುವ ರೈತ ಸಾವಯವ ಕೃಷಿ ಕಡೆಗೆ ಮುಖ ಮಾಡಿದರೆ ಈ ಕೃತಿ ಹೊರತಂದಿದ್ದು ಸಾರ್ಥಕವಾಗುತ್ತದೆ..
Binding
Soft Bound
Author
Dr V P Hegde
Number of Pages
158
Publisher
Kavyakala Prakashana
Publication Year
2025
Height
1 CMS
Length
22 CMS
Weight
100 GMS
Width
14 CMS
Language
Kannada