Quantity
Product Description
ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರರು Annihilation of Caste ಬರೆಯುವಾಗ ಹಿಂದೂವೆಂಬ ಬ್ರಾಹ್ಮಣ ಸಮಾಜದಲ್ಲಿ ದಲಿತ ಸಮುದಾಯಗಳಿಗೆ ವಿಮೋಚನೆಯ ಭರವಸೆಯೇ ಇಲ್ಲವೇನೋ ಎಂದುಕೊಂಡಿದ್ದರು. ಆದರೆ ಅಂತಿಮ ಪರಿಹಾರೋಪಾಯವೇನು ಎಂಬ ವಿಷಯದಲ್ಲಿ ಅವರು ಸ್ಪಷ್ಟವಾದ ನಿರ್ಧಾರಕ್ಕೆ ಬಂದಿರಲಿಲ್ಲ. 'ತಮ್ಮ ಮಧ್ಯವಯಸ್ಸಿನಲ್ಲಿ ಬುದ್ಧನ ವಿಚಾರಗಳು ಅವರನ್ನು ಗಾಢವಾಗಿ ಸೆಳೆದವು. ರಾಷ್ಟ್ರದ ಸ್ವಾತಂತ್ರ್ಯ ಮತ್ತು ಶ್ರೇಯೋಭಿವೃದ್ಧಿಗೆ ಬುದ್ಧನ ಮೌಲ್ಯತತ್ವಗಳ ಆಚರಣೆಯೊಂದೇ ಅಂತಿಮಮಾರ್ಗವೆಂದು ಅವರಿಗೆ ಮನವರಿಕೆಯಾಯಿತು. ಇದರ ಭಾಗವಾಗಿಯೇ 1956 ಅಕ್ಟೋಬರ್ 14 ರಂದು ಅಂದರೆ ಅವರ ಪರಿನಿಬ್ಬಾಣಕ್ಕೆ ಕೇವಲ 52 ದಿನಗಳ ಮುಂಚೆ ಬೌದ್ಧಧಮ್ಮಕ್ಕೆ ಶರಣಾದರು. ಹಿಂದೂಧರ್ಮವನ್ನು ತೊರೆದು ಲಕ್ಷಾಂತರ ಜನರು ಬಾಬಾಸಾಹೇಬರನ್ನು ಅನುಸರಿಸಿ ಬೌದ್ಧಧರ್ಮವನ್ನು ಅಪ್ಪಿಕೊಂಡರು.
ಯಾವತ್ತಿಗೂ ಭಾರತದೇಶಕ್ಕೆ ಅಗತ್ಯವಾಗಿ ಬೇಕಾಗಿರುವುದು ವೈಜ್ಞಾನಿಕ ದೃಷ್ಟಿಕೋನ ಮತ್ತು ನೈತಿಕಮಾರ್ಗಾನುಯಾದ ಶಿಕ್ಷಣ. ಮಾನವಕುಲದ ಸಮಗ್ರ ವಿಕಾಸಕ್ಕಾಗಿ ಬೌದ್ಧಧರ್ಮವು ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸಬಲ್ಲದು. ಬೌದ್ಧಧರ್ಮವು ದೈವ ಸಾಕ್ಷಾತ್ಕಾರವನ್ನು ನಂಬುವುದಿಲ್ಲ ಮಾತ್ರವಲ್ಲ, ಪವಾಡಗಳನ್ನು ಅವಲಂಬಿಸಿರುವುದಿಲ್ಲ. ಸ್ವರ್ಗದ ಲಾಭವನ್ನು ಮತ್ತು ಅಂಥ ಆಸೆಗಳನ್ನು ತೋರುವುದಿಲ್ಲ. ಸಮಾನತೆ, ಭ್ರಾತೃತ್ವ, ಸ್ವಾತಂತ್ರತೆ ಮಾತ್ರವಲ್ಲ ಏಕತೆ ಅದರ ತತ್ವಗಳು. ವ್ರತಾಚಾರಗಳ ಕಟ್ಟುಗಳಾಗಲೀ ಉತ್ಸವಗಳ ಪ್ರದರ್ಶನಗಳಿಲ್ಲ. ವಂಶಪಾರಂಪರ್ಯ ಹಕ್ಕುಗಳನ್ನು ಸಾಧಿಸಿಕೊಂಡು ಬಂದ ಹಕ್ಕಿನ ಗುರುಗಳಿಲ್ಲ. ಬಡತನ ಹಾಗೂ ಅಜ್ಞಾನಗಳನ್ನು ಹಣೆಬರೆಹದ ಭಾಗ್ಯವೆಂದು ಬಣ್ಣಿಸಿ ನಂಬುವುದಿಲ್ಲ. ಆಳುವ ಪೋಪ್, ಇದಮಿತ್ಥಂ ಎಂದು ಖಂಡಾತುಂಡವಾಗಿ ಹೇಳುವ ಶಂಕರಚಾರ್ಯನಿಲ್ಲ. ದೇವರ ಜಾಗದಲ್ಲಿ ನೀತಿಯಿದೆ. ದಯೆ, ಪ್ರೇಮ, ವಿಚಾರಶೀಲತೆ. ಆಚಾರಶುದ್ಧಿ, ಆತ್ಮಗೌರವ ಮತ್ತು ಸ್ವಾವಲಂಬನೆ ಇವುಗಳೇ ಬೌದ್ಧಧಮ್ಮಕ್ಕೆ ಆಧಾರ. ಅಜ್ಞಾನ, ಸ್ವಾರ್ಥ, ಭಯ ಮತ್ತು ಮೂಡ ಶ್ರದ್ಧತೆಯಿಂದ ಹುಟ್ಟಿ ಬೆಳೆದಿರುವ ಅನಿಷ್ಠಗಳ ಮೂಲೋದ್ಘಾಟನೆ ಮಾತ್ರವಲ್ಲದೆ ಜಾತಿನಿರ್ಮೂಲನೆಗೂ ಅಂಬೇಡ್ಕರ್ ಅವರು ತೋರಿಸಿದ ಮಾರ್ಗವೂ ಇದೇ. ಬಾಬಾಸಾಹೇಬರು ಬರೆದಿರುವ ಜಾತಿ ನಿರ್ಮೂಲನೆ ಕುರಿತ ಗ್ರಂಥಗಳನ್ನು ನನ್ನ ದೇಶಖಾಂಧವರು ಓದುವರೆಂದೂ, ಇಂಡಿಯಾವು ಜಾಗತಿಕಮಟ್ಟದಲ್ಲಿ ಮಹಾನ್ ಸ್ವತಂತ್ರ ರಾಷ್ಟ್ರವಾಗುವಂತೆ ಮನಸ್ಪೂರ್ವಕವಾಗಿ ಪ್ರಯತ್ನಿಸುವರೆಂದೂ ನಾನು ಬಯಸುತ್ತೇನೆ.
Binding
Soft Bound
Author
P Aradimallaiah Kattera
Publication Year
2024
Publisher
Amitha Prakashana
Length
22 CMS
Weight
200 GMS
Width
14 CMS
Height
2 CMS
Language
Kannada