Product Description
ವಚನ ನುಡಿ ಕಲ್ಪ ಕಲ್ಪನಾ ಅರುಣಾ ಅವರ ಕೃತಿಯಾಗಿದೆ. ವರ್ಷಗಳಿಂದ ಪ್ರೌಢಶಾಲೆಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಸಾಹಿತ್ಯಕ, ಕಲ್ಪನಾರ ಕನ್ನಡ ನುಡಿ ನೆಲದ ಭಕ್ತಿ, ಅವರೊಳಗಿನ ಸಾಹಿತ್ಯ ಶಕ್ತಿ ಕಂಡ ಇಂದಿರಾ ನಗರದ ರೋಟರಿ ಕ್ಲಬ್, ಲೇಖಕರ ಸಂಘ, ಕನ್ನಡ ಸಾಹಿತ್ಯ ಪರಿಷತ್, ಅಖಿಲ ಹವ್ಯಕ ಮಹಾಸಭಾ, ಲೇಖಕ, ಸಮರ್ಪಣಾ, ವಿಕಾಸವೃಂದ, ಕನ್ನಡ, ಕಸ್ತೂರಿ ಸಿರಿಗನ್ನಡ . ಸಾಹಿತ್ಯ ವೇದಿಕೆಗಳು ನಾಡಿನಾದ್ಯಂತ ಅವರನ್ನು ಗುರುತಿಸಿ, ಸನ್ಮಾನಿಸಿ ಅಭಿನಂದಿಸಿವೆ. ರೆಡಿಯೋ ಕಣ್ಮಣಿ, ಪ್ರತಿಲಿಪಿ, ಇಂಚರ ಸಾಹಿತ್ಯ ಬಳಗ, ಸಾಧಾರ ನ್ಯೂಸ್, ಯೂಟ್ಯೂಬ್ ಸಹಿತ ಹಲವು ಆಧುನಿಕ ಮಾಧ್ಯಮಗಳಲ್ಲೂ ತಮ್ಮ ಸಾಹಿತ್ಯ ಸಾಮಾಜಿಕ ಅನುಭವಗಳನ್ನು ದಿಟ್ಟವಾಗಿ ದಾಖಲಿಸುತ್ತಿರುವ ಕಲ್ಪನಾ ಕನ್ನಡ ನಾಡಿನ ಭರವಸೆಯ ಲೇಖಕಿಯಾಗಿ ಹೊರಹೊಮ್ಮುತ್ತಿರುವುದು ಅಭಿನಂದನೀಯ ಎನ್ನುತ್ತಾರೆ ಕೃಷ್ಣಮೂರ್ತಿ.