Select Size
Quantity
Product Description
ಪಶ್ಚಿಮ ಬಂಗಾಳದ ಚಿತ್ತಗಾಂವ್(ಈಗ ಬಾಂಗ್ಲಾದೇಶಕ್ಕೆ ಸೇರಿದೆ)ನಲ್ಲಿ ಓರ್ವ ಸಮಾನ್ಯ ಶಾಲಾ ಶಿಕ್ಷಕನಾಗಿದ್ದ ಸೂರ್ಯಸೇನ್ನ ನೇತೃತ್ವದಲ್ಲಿ ಹದಿಹರೆಯದ ಬಾಲಕರು-ತರುಣಿಯರು ಸಶಸ್ತ್ರ ಹೋರಾಟಕ್ಕಿಳಿದು ಬ್ರಿಟೀಷರನಿದ್ದೆಗೆಡಿಸಿದ್ದನ್ನು, ತತ್ಪರಿಣಾಮವಾಗಿ ಬಂಗಾಳದ ಹಳ್ಳಿಹಳ್ಳಿಗಳಲ್ಲೂ ಕ್ರಾಂತಿಜ್ವಾಲೆ ಹರಡಿದ್ದನ್ನೂ ಸಾಧಾರವಾಗಿ ವಿವರಿಸುವ ಅಪೂರ್ವ ಕಥನ – ’ಮಾಡಿ ಮಡಿದವರು’. ತರುಣಿಯೊಬ್ಬಳು ಮೊತ್ತಮೊದಲ ಬಾರಿಗೆ ಕಾರ್ಯಾಚರಣೆಯ ನೇತೃತ್ವವಹಿಸಿ ಬಲಿದಾದಗೈಯುವ ಮೂಲಕ ಕ್ರಾಂತಿಕಾರೀ ಹೋರಾಟದ ರಣಕಣಕ್ಕೆ ಹೆಣ್ಣುಮಕ್ಕಳೂ ಪ್ರತ್ಯಕ್ಷವಾಗಿ ಧುಮುಕಲು ಪ್ರೇರಣೆಯಾದ ಹೋರಾಟವಿದು. ಗಾಂಧಿಯವರು ’ಮಾಡು ಇಲ್ಲವೇ ಮಡಿ’ ಎಂದು ಘೋಷಿಸುವುದಕ್ಕೂ ಮೊದಲೇ ’ಮಾಡು ಮತ್ತು ಮಡಿ’ ಎಂದು ರಣಹೂಂಕಾರಗೈದ ಚಿತ್ತಗಾಂವ್ನ ಕ್ರಾಂತಿಕಾರಿಗಳು ನೇತಾಜಿ ಸುಭಾಷ್ಚಂದ್ರ ಬೋಸರು ’ಭಾರತೀಯ ರಾಷ್ಟ್ರೀಯ ಸೇನೆ’ ರಚಿಸುವದಕ್ಕೂ ಮೊದಲೇ ’ಭಾರತೀಯ ಗಣತಂತ್ರ ಸೇನೆ’ಯನ್ನು ಕಟ್ಟಿ ಬ್ರಿಟೀಷರ ವಿರುದ್ಧ ಶಸಸ್ತ್ರ ಯುದ್ಧ ನಡೆಸಿದ್ದರ ಪ್ರೇರಣಾದಾಯೀ ಕಥನವಿದು.
Weight
400 GMS
Length
20 CMS
Publication Year
2024
Author
B P Premakumar
Publisher
Rashtrotthana Sahitya
ISBN-13
9789393991898
Number of Pages
308
Binding
Soft Bound
Language
Kannada