Select Size
Quantity
Product Description
ಸಾಹಿತಿ ಜಿ.ಎನ್.ರಂಗನಾಥ ರಾವ್ ಅವರ ‘ಅನ್ಯರು ಅನನ್ಯರು’ ಕೃತಿಯು ಪಾಶ್ಚಾತ್ಯ ಲೇಖಕರ ಬಗೆಗೆ ಬರೆದ ಬರಹಗಳ ಸಂಗ್ರಹವಾಗಿದೆ. ಈ ಕೃತಿಯ ಮೂಲಕ ಲೇಖಕರು ಪಾಶ್ಚಾತ್ಯ ಸಾಹಿತ್ಯ ಅಭಿಜಾತ ಸಾಹಿತಿಗಳ ಅಭಿಜಾತ ಕೃತಿಗಳನ್ನು ಕನ್ನಡಿಗರಿಗೆ ಪರಿಚಯಿಸಲಾಗಿದೆ. ಲೇಖಕ ರಂಗನಾಥ ರಾವ್ ಅವರು ಕೃತಿಯ ಪ್ರಾರಂಭದಲ್ಲಿ ಬರೆದಂತೆ, ‘ಮಹತ್ವದ ಕೃತಿಗಳನ್ನು ಅನುವಾದಿಸಿದ ಸಂದರ್ಭದಲ್ಲಿ ನಡೆಸಿದ ಅಧ್ಯಯನದ ಫಲಶ್ರುತಿ ಈ ಕೃತಿ. ಈ ಅಭಿಜಾತರಲ್ಲಿ, ಶೇಕ್ಸ್ಪಿಯರ್, ಟಾಲ್ಸ್ಟಾಯ್ ಅಂಥವರು ತಲಾಂತರಗಳಿಂದ ನಮ್ಮ ಮಹಾನ್ ಸೃಜನಶೀಲ ಪ್ರತಿಭೆಗಳಾದ ಡಿ.ಬಿಜಿ, ಮಾಸ್ತಿ, ಕುವೆಂಪು ಮೊದಲಾದವರಿಂದ ಕನ್ನಡಕ್ಕೆ ಅನುವಾದಗೊಂಡವರು ಸುಪರಿಚಿತರು. ಕಾವ್ಯ, ಅನ್ವೀ, ಲಾರೆನ್ಸ್, ಜೀನ್ ಜೆನ್, ಬ್ರೆಕ್ಟ್ ಮೊದಲಾದವರು ವಿರಳವಾಗಿ ಕನ್ನಡದಲ್ಲಿ ಕಾಣಿಸಿಕೊಂಡವರು. ಈ ಎಲ್ಲ ಮಹನೀಯರನ್ನು ಪರಿಚಯಿಸುವ ಪ್ರಯತ್ನದಲ್ಲಿ ನಾನು ಅವರ ಮಹತ್ವದ, ಪ್ರಾತಿನಿಧಿಕವೆನ್ನಬಹುದಾದ, ಆದರೆ ಹೆಚ್ಚಾಗಿ ಚರ್ಚಿಸದೇ ಇರುವ ಕೃತಿಗಳನ್ನು ಪರಾಮರ್ಶೆಗೆ ಆಯ್ದುಕೊಂಡಿದ್ದೇನೆ. ವಿವಿಧ ಸಾಂಸ್ಕೃತಿಕ ಅನನ್ಯತೆ, ವಿಚಾರಧಾರೆ ಮತ್ತು ಪ್ರಾಚೀನವೂ ಅರ್ವಾಚೀನವೂ ಆದ ಸಂವೇದನೆಗಳಿಗೆ ಬೆಳಕಂಡಿಯಾಗುವ ವಿನಮ್ರ ಪ್ರಯತ್ನವಿದು. ಈ ಲೇಖನಗಳನ್ನು ಸಂಕಲಿಸಿ ಪ್ರಕಟಿಸಿದಲ್ಲಿ ಸಾಹಿತ್ಯದ ವಿದ್ಯಾರ್ಥಿಗಳಿಗೆ ಲೇಶ ಮಾತ್ರವಾದರೂ ಪ್ರಯೋಜನಕಾರಿಯಾದೀತು ಎನ್ನುವ ಆಲೋಚನೆ ಬಹಳ ದಿನಗಳದು. ಈಗ ಅದು ಕೈಗೂಡುತ್ತಿರುವುದು ಸಂತಸದ ಸಂಗತಿ’ ಎಂದಿದ್ದಾರೆ.. ಕವಿ ಡಾ. ಎಚ್. ಎಸ್. ವೆಂಕಟೇಶಮೂರ್ತಿ ಅವರು ಈ ಕೃತಿಗೆ ಬೆನ್ನುಡಿ ಬರೆದಿದ್ದಾರೆ. ಕೃತಿಯ ಪರಿವಿಡಿಯಲ್ಲಿ ವಿಲಿಯಮ ಶೇಕ್ಸ್ ಪಿಯರ್, ಲಿಯೊ ಟಾಲ್ ಸ್ಟಾಯ್, ಫ್ರಾನ್ಜ್ ಕಾಫ್ಕ, ಜೀನ್ ಅನ್ವೀ, ಡಿ.ಎಚ್.ಲಾರೆನ್ಸ್, ಜೀನ್ ಜೆನೆ, ಕತೆಗರ ಓ ಹೆನ್ರಿ, ಅಲೆಕ್ಸಾಂಡರ್ ಸೋಲ್ಜೆನಿತ್ಸಿನ್, ಖಲೀಲ್ ಗಿಬ್ರಾನ್, ಬರ್ಟೋಲ್ಟ್ ಬ್ರೆಕ್ಟ್ ಎಂಬ ಶೀರ್ಷಿಕೆಗಳಿವೆ.
Binding
Soft Bound
Author
G N Ranganatha Rao
Publisher
Sapna Book House Pvt Ltd
ISBN-13
9789354560026
Number of Pages
220
Publication Year
2021
Length
22 CMS
Width
14 CMS
Height
2 CMS
Weight
250 GMS
Language
Kannada