Product Description
‘ಮೈ ಫಾದರ್ ಬಾಲಯ್ಯ’ ಇಂಗ್ಲಿಷ್ನಲ್ಲಿ ಮತ್ತು ತೆಲುಗಿನಲ್ಲಿ ಬಂದ ಮೊದಲ ದಲಿತ ಆತ್ಮಕಥನ. ದಲಿತನೊಬ್ಬನ ಬದುಕನ್ನು ಸಶಕ್ತವಾಗಿ ಕಟ್ಟಿಕೊಡುವ ಈ ಕ್ತಿ ಅಸ್ಪೃಶ್ಯರ ಬದುಕಿಗೆ ಸ್ಫೂರ್ತಿದಾಯಕ ಮತ್ತು ಮಾರ್ಗದರ್ಶಿ ಕೂಡ. ಭಾರತೀಯ ಸಮಾಜದ ದಲಿತರ ಬದುಕಿನ ಅದ್ಭುತ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿಕೊಡುವ ಒಂದು ಜಾತಿಯ ಗಾಥೆ. ಒಂದೊಂದೇ ಹನಿಯಾಗಿ... ಕಣ್ಣೀರು ಸುರಿಸಿ... ವೇದನೆಗಳನ್ನು ಅನುಭವಿಸಿ... ಬಹುದೂರ ಗಮಿಸಿ, ಘನೀಭವಿಸಿ... ತನ್ನ ಮೇಲೆ ಬಿದ್ದ ಬೆಳಕನ್ನು ಪ್ರತಿಫಲಿಸಿ, ಸಪ್ತವರ್ಣವಾಗಿ ಬದಲಾದ ವೀರಗಾಥೆ!
ಒಬ್ಬ ಸಾಮಾನ್ಯನ ಬದುಕಿನ ಚಿತ್ರಣ...! ಅವಮಾನ ಭಾರದೊಳಗಿಂದ ಆವಿರ್ಭಸಿದ ಹೊಸ ಚಿಗುರು...! ಓದುತ್ತಾ ಹೋದಂತೆ ಕೆಲವು ಸಲ ನಮಗೇ ಅರಿವಿಲ್ಲದೆ ಕಣ್ಣುಗಳನ್ನು ಒದ್ದೆ ಮಾಡುತ್ತದೆ... ಮನಸ್ಸು ಮುದುಡುತ್ತದೆ... ಎದೆ ಭಾರವಾಗುತ್ತದೆ... ಹೃದಯ ನಡುಗಿಸುತ್ತದೆ... ಮೆದುಳಿಗೆ ಜೋಮು ಹಿಡಿಸುತ್ತದೆ... ಮನುಷ್ಯ ಎನಿಸಿಕೊಂಡ ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕ.