Quantity
Product Description
ನಮ್ಮದೇ ಮನಸ್ಸು, ನಮ್ಮದೇ ಆಲೋಚನೆಗಳು. ಆದರೆ ಅವು ಕೊಡುವಷ್ಟು ಕಿರಿಕಿರಿ ತೊಂದರೆಗಳನ್ನು ಇನ್ಯಾರೂ ಕೊಡುವುದಿಲ್ಲ. ವಿನಾ ಕಾರಣ ದುಃಖ ದುಃಖ ಎನಿಸುವುದು, ಎಲ್ಲರ ನಡುವೆಯಿದ್ದರೂ ಒಂಟಿ ಎನಿಸುವುದು, ಇನ್ನೊಬ್ಬರ ಎದುರು ನಮ್ಮಷ್ಟಕ್ಕೇ ನಾವು ಕುಗ್ಗುವುದು, ನಾವು ಅಸಹಾಯಕರು ಎನಿಸುವುದು, ಸಣ್ಣಪುಟ್ಟದಕ್ಕೂ ವಿಪರೀತ ಭಯವಾಗುವುದು, ಆತ್ಮವಿಶ್ವಾಸವೇ ಇಲ್ಲದೆ ನಮ್ಮನ್ನೇ ನಾವು ಕೆಳಕ್ಕೆ ಹಾಕಿಕೊಳ್ಳುವುದು, ಇದೆಲ್ಲ ಆಗುತ್ತಿದ್ದರೆ ನೀವು ಈ ಪುಸ್ತಕ ಓದಲೇಬೇಕು.
ಪ್ರಪಂಚದಲ್ಲಿ ದೊಡ್ಡ ದೊಡ್ಡ ಸಮಸ್ಯೆಗಳಿವೆ. ಅದಕ್ಕೆ ಕಾರಣಗಳೂ ಹಲವಾರಿವೆ. ಅದನ್ನು ಬಗೆಹರಿಸಲೂ ಹಲವಾರು ಮಂದಿಯಿದ್ದಾರೆ. ಆದರೆ ನಮ್ಮ ಪುಟ್ಟ ಮನಸ್ಸಿನ ಪುಟ್ಟ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಲು ನಮ್ಮನ್ನು ಬಿಟ್ಟರೆ ಇನ್ಯಾರೂ ಇಲ್ಲ.
ನನಗ್ಯಾಕೆ ಹೀಗಾಗುತ್ತಿದೆ? ನನಗೊಂದೇ ಹೀಗಾ? ನಾನೇ ಯಾಕೆ ಹೀಗೆ? ಇದಕ್ಯಾರು ಕಾರಣ? ನಾನೆಷ್ಟು ಕಾರಣ? ಎನ್ನುವ ನೂರಾರು ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿದ್ದರೆ ನೀವು ಈ ಪುಸ್ತಕ ಓದಬೇಕು.
ಎಷ್ಟೋ ಸಲ ನಮ್ಮ ಬದುಕು ಹಳ್ಳ ಹಿಡಿಯಲು ನಮ್ಮ ವ್ಯಕ್ತಿತ್ವದ ದೋಷಗಳೇ ಕಾರಣ. ನಮ್ಮೊಳಗಿನ ಪ್ರೋಗ್ರಾಮಿಂಗ್ ಕಾರಣ. ನಮ್ಮ ನಂಬಿಕೆಗಳು ಕಾರಣ. ಅವುಗಳಲ್ಲಿ ಕೆಲವನ್ನು
ರಿ ಪ್ರೋಗ್ರಾಮಿಂಗ್ ಮಾಡಿಕೊಳ್ಳಬೇಕು. ಇನ್ನು ಕೆಲವನ್ನು ಡಿಲೀಟ್ ಮಾಡಬೇಕು.
ಅದೆಷ್ಟೋ ಸಲ ನಾನೇ ಸರಿಯಿಲ್ಲ. ನನ್ನ ಪೂರ್ತಿಯಾಗಿ ಅಳಿಸಿ ಹೊಸ ಮನುಷ್ಯನನ್ನು ಮಾಡಿಕೊಂಡು ಬಿಡಬೇಕು ಎನ್ನಿಸುತ್ತದೆ. ನಾಳೆ ಬೆಳಿಗ್ಗೆಯಿಂದ ಹೊಸ ನಾನು ಆಗಿಬಿಡಬೇಕು ಅನ್ನಿಸುತ್ತದೆ. ಮತ್ತೆ ಹೊಸದಾಗಿ ಬದುಕುವ ಅವಕಾಶ ಸಿಕ್ಕಿದ್ದರೆ ಅನ್ನಿಸುತ್ತದೆ. ನಿಮಗೇನಾದರೂ ಅಂಥದೊಂದು ಬಯಕೆ ಇದ್ದಲ್ಲಿ ನೀವು ಈ ಪುಸ್ತಕ ಓದಲೇಬೇಕು.
ನಮ್ಮ ಜೀವನ ಗ್ರಹಗತಿ ಬದಲಾಗುವುದರಿಂದ ಬದಲಾಗುವುದಿಲ್ಲ. ಯಾವುದೋ ಪೂಜೆ ಮಾಡಿಸುವುದರಿಂದ ಬದಲಾಗುವುದಿಲ್ಲ, ಟೈಂ ಬರತ್ತೆ ಎಂದು ಕಾಯುವುದರಿಂದ ಬದಲಾಗುವುದಿಲ್ಲ ಅಥವಾ ಕಾಲ ಕಳೆದಂತೆಯೂ ಬದಲಾಗಲ್ಲ. ನಮ್ಮ ಬದುಕು ನಮ್ಮನ್ನು ನಾವು ಬದಲಾಯಿಸಿಕೊಳ್ಳುವುದರಿಂದ ಮಾತ್ರ ಬದಲಾಗುತ್ತದೆ!
ಹೇಗೆ? ಎಷ್ಟು ಸಮಯ ಬೇಕು? ಏನೆಲ್ಲ ಮಾಡಬೇಕು? ಏನೆಲ್ಲ ತಿಳಿಯಬೇಕು?
ಈ ಪುಸ್ತಕ ಓದಿ. ಈ ಪುಸ್ತಕ ನಿಮಗೆ ನೀವೇ ಕೊಟ್ಟುಕೊಳ್ಳುವ ಗಿಫ್ಟ್.
ಬದುಕಿನ ಹೊರೆ ಇಳಿದು ನಮ್ಮೆಲ್ಲರ ಮನ ಹಗುರಾಗಲಿ.
Author
Shwetha Bhide
Binding
Soft Bound
ISBN-13
9788197762734
Number of Pages
164
Publication Year
2025
Publisher
Sawanna Enterprises
Height
1 CMS
Length
22 CMS
Weight
200 GMS
Width
14 CMS
Language
Kannada