Product Description
ವ್ಯಕ್ತಿ ವಿಕಸನ ಮಾಲೆಯ ಪುಸ್ತಕ. ಹೆಣ್ಣು ಮನೆಯ ಕಣ್ಣು. ಸಂಸಾರ ರಥದಲ್ಲಿ ಅವಳ ಪಾತ್ರ ಮಹತ್ವದ್ದು. ಬದುಕಿನ ಏರಿಳಿತಗಳಿಗೆ ಹೊಂದಿಕೊಂಡು, ಅತ್ಯಂತ ಸೂಕ್ಷ್ಮ ಕೌಟುಂಬಿಕ ಸಮಸ್ಯೆಗಳನ್ನು ಯಶಸ್ವಿಯಾಗಿ ನಿಭಾಸಬಲ್ಲ ಚಾಕಚಕ್ಯತೆ ಗೃಹಿಣಿಗಿರಬೇಕು. ಕುಟುಂಬದ ಸದಸ್ಯರ ನಡುವೆ ಪ್ರೀತಿ, ಸಹಕಾರವಿರಬೇಕು. ಯಾವುದು ಸರಿ ಯಾವುದು ತಪ್ಪು ಎನ್ನುವ ವಿವೇಚನೆರಬೇಕು. ಗಂಡ-ಮಕ್ಕಳು-ಬಳಗ ಇತ್ಯಾದಿ ಹೊಣೆಗಾರಿಕೆಗಳು, ಉದ್ಯೋಗಸ್ಥ ಮಹಿಳೆಯಾಗಿದ್ದರೆ ಕಚೇರಿಯ ಕೆಲಸದ ಒತ್ತಡಗಳು ಇವೆಲ್ಲವನ್ನೂ ನಿಭಾಸುವ ಜಾಣ್ಮೆ ಗೃಹಿಣಿಗಿರಬೇಕು. ಇಲ್ಲದಿದ್ದರೆ ಮನಸ್ಸು ಸ್ಥಿಮಿತತೆ ಕಳೆದುಕೊಂಡು ಸಂಸಾರ ‘ಸಾರ’ವಿಲ್ಲದಂತಾಗುತ್ತದೆ. ಪ್ರತಿಯೊಬ್ಬ ಮಹಿಳೆಗೂ ತಾನೊಬ್ಬ ಯಶಸ್ವೀ ಗೃಹಿಣಿಯಾಗಬೇಕೆಂಬ ಮಹದಾಸೆ ಇರುತ್ತದೆಯಲ್ಲವೆ! ಹಾಗಾಗಲು ಏನು ಮಾಡಬೇಕು, ಈ ಪುಸ್ತಕ ಅದಕ್ಕೆ ಮಾರ್ಗದರ್ಶನ ನೀಡುತ್ತದೆ. ಶ್ರೀಮತಿ ಶಾಂತಾ ನಾಗರಾಜ್ ಈ ಪುಸ್ತಕದ ಲೇಖಕರು.