Select Size
Quantity
Product Description
ಖ್ಯಾತ ಹಿಂದಿ ಲೇಖಕ ಹಿಮಾಂಶು ಜೋಶಿ ಅವರ ಕಥಾ ಜಗತ್ತು ಅತ್ಯಂತ ವ್ಯಾಪಕ. ವಿವಿಧ ಆಯಾಮಗಳನ್ನೊಳಗೊಂಡ ಇವರ ಕೃತಿಗಳಲ್ಲಿ ಜೀವನದ ಯಥಾರ್ಥ ಸಹಜವಾಗಿ ಮೂಡಿ ಬಂದಿದೆ. ಇವರ ಸಜೀವ ಪಾತ್ರಗಳ ದರ್ಪಣದಲ್ಲಿ ಪ್ರತಿಬಿಂಬಿತಗೊಂಡಿರುವ ಜಗತ್ತು ಓದುಗನಿಗೆ ತನ್ನ ಸುತ್ತಮುತ್ತಲಿನದೇ ಎನಿಸತೊಡಗುತ್ತದೆ- ತನ್ನದೇ ಅನುಭೂತಿಗಳ ವಿವಿಧ ಬಿಂಬಗಳಂತೆ. ಇಂದಿನ ಕಥಾಜಗತ್ತಿನಲ್ಲಿ ತನ್ನದೇ ಆದ ಒಂದು ಸ್ಥಾನವನ್ನು ಗುರುತಿಸಿಕೊಂಡಿರುವ ಈ ಕತೆಗಳಲ್ಲಿ ಮುಂಬರುವ ನಾಳಿನ ಕತೆಗಳ ಸ್ಪರೂಪದ ಹೊಳಪು ಕಾಣುತ್ತದೆ. ‘ಹಿಮಾಂಶು ಜೋಶಿ ಕೀ ಲೋಕಪ್ರಿಯ ಕಹಾನಿಯಾಂ’ ಮತ್ತು ‘ಸಾಗರ್ ತಟ್ ಕೇ ಶಹರ್’ -ಈ ಎರಡು ಕಥಾಸಂಕಲನಗಳಿಂದ ಆಯ್ದ ಹದಿನಾರು ಕತೆಗಳು ಲೇಖಕರ ಜೀವನಾನುಭವ ಹಾಗೂ ಅನುಭೂತಿಗಳಿಂದ ಸುತ್ತಮುತ್ತಲಿನ ಪರಿಸರ -ವಿಶೇಷವಾಗಿ ಪರ್ವತ ಪ್ರದೇಶ, ಜನಜೀವನ, ಮಣ್ಣಿನ ಸೊಗಡು, ಹೆಣ್ಣಿನ ಬವಣೆ, ಸ್ವಾತಂತ್ರ್ಯ ಹೋರಾಟಗಾರರ ನೋವು ಹಾಗೂ ಹಿರಿಯ ನಾಗರಿಕರ ಅಸಹಾಯಕತೆ-ಇವುಗಳನ್ನು ನಾನಾ ರೂಪಗಳಲ್ಲಿ, ನಾನಾ ಬಣ್ಣಗಳಲ್ಲಿ ಚಿತ್ರಿಸಿದ್ದಾರೆ. ಕನ್ನಡದ ಓದುಗರ ಆಸ್ವಾದನೆಗಾಗಿ ಹಿಂದಿಕತೆಗಳನ್ನು ಅನುವಾದಿಸಿದವರು ಡಾ.ಜೆ.ಎಸ್.ಕುಸುಮಗೀತ.
Author
J S Kusuma Geetha
Binding
Soft Bound
Number of Pages
124
Publication Year
2021
Publisher
Nava Karnataka Publications Pvt Ltd
Height
2 CMS
Length
22 CMS
Weight
200 GMS
Width
14 CMS
Language
Kannada