Quantity
Product Description
ಲೇಖಕಿ, ಅನುವಾದಕಿ ಎಂ.ಆರ್. ಕಮಲಾ ಅವರ ಅನುವಾದಿತ ಕೃತಿ ಕೆನ್ನೀಲಿ. ಆಧುನಿಕ ಆಫ್ರಿಕನ್ - ಅಮೆರಿಕನ್ ಸಾಹಿತ್ಯಕ್ಕೆ ಹೊಸ ಸಂವೇದನೆ, ಹೊಸ ನೋಟ ನೀಡಿದ ಅಲೀಸ್ ವಾಕರ್ ಅವರ ಪ್ರಬಂಧ, ಉಪನ್ಯಾಸ, ಲೇಖನಗಳು 'ಕೆನ್ನೀಲಿ' ಬಣ್ಣದ ಮೂಲಕ ಕನ್ನಡಕ್ಕೆ ಅಡಿಯಿಟ್ಟಿದೆ. ಕೃತಿಯ ಕರ್ತೃವಿನ ಮಾತಿನಂತೆ `ನಾನು ಬರೆಯುವ ಅಥವಾ ನಾವೆಲ್ಲಾ ಬರೆಯುವ ಕತೆಗಳು ನನ್ನ, ನಮ್ಮ ಅವ್ವನ ಕತೆಗಳೇ; ಎಂಬ ಅಲೀಸ್ ವಾಕರ್ ಮಾತು ಅವಳೇ ಹೇಳುವಂತೆ ನನಗೂ ಅರ್ಥವಾಗಿದ್ದು ಕೊಂಚ ತಡವಾಗಿಯೇ. ಇದರ ಜೊತೆಗೆ ಇವು ಜಗತ್ತಿನ ಎಲ್ಲ ಹೆಣ್ಣುಮಕ್ಕಳ ಕತೆಗಳು ಎನಿಸಿದ್ದರಿಂದಲೇ ಈ ಪುಸ್ತಕವನ್ನು ಅನುವಾದಿಸಬೇಕೆನ್ನಿಸಿತು. ಈ ಪುಸ್ತಕಕ್ಕೆ ಇನ್ನೂ ಹಲವಾರು ಆಯಾಮಗಳಿದ್ದರೂ, ವೈವಿಧ್ಯಮಯ ವಿಷಯಗಳಿದ್ದರೂ ಅದು ಪ್ರಧಾನವಾಗಿ ಬದುಕನ್ನು ಹಸನಾಗಿಸಲು ಹೆಣ್ಣುಮಕ್ಕಳು ನಡೆಸಿದ ಹೋರಾಟದ ಕತೆಗಳನ್ನೇ ಹೇಳುತ್ತದೆ. ಹೆಚ್ಚು ಕಮ್ಮಿ ಐನೂರು ಪುಟಗಳಿರುವ ಪುಸ್ತಕದ ಕೆಲವು ಭಾಗಗಳನ್ನು ಮಾತ್ರ ಅನುವಾದಿಸಿದ್ದೇನೆ ಎಂದಿದ್ದಾರೆ.
Author
M R Kamala
Binding
Soft Bound
Number of Pages
224
Publication Year
2022
Publisher
Kathana Prakashana
Height
2 CMS
Length
22 CMS
Weight
200 GMS
Width
14 CMS
Language
Kannada