Quantity
Product Description
ಅರಿವಿನ ಮರ” ಕೃತಿ ಕೊವಿಡ್ ಕಾಲದಲ್ಲಿ ಆನ್ಲೈನ್ ಮೂಲಕ ನಡೆದ ಜ್ಞಾನಸುಧಾ ಉಪನ್ಯಾಸ ಮಾಲೆಯ ಉಪನ್ಯಾಸಗಳ ಸಂಗ್ರಹವಾಗಿದ್ದು, ಬರೆಹರೂಪದಲ್ಲಿ ಪ್ರಕಟವಾಗಿದೆ. ಈ ಕೃತಿಯನ್ನು ಶ್ರೀ ಯೋಗೀಶ್ ತೀರ್ಥಪುರ, ಡಾ. ವಿನೀತ್ ಕುಮಾರ್ ಟಿ.ವಿ. ಹಾಗೂ ಶ್ರೀ ಪಾಂಡುರಂಗ ನಾರಾಯಣ ಸಂಪಾದಿಸಿದ್ದಾರೆ. ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಅಧ್ಯಕ್ಷರು ಹಾಗೂ ಪರಮಪೂಜ್ಯರಾದ ಶ್ರೀ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಗಳು ಈ ಕೃತಿಗೆ ಶುಭಾಶಯ ಸಂದೇಶವನ್ನು ನೀಡಿದ್ದಾರೆ. ಅದೇ ರೀತಿ, ತುಮಕೂರಿನ ಹಿರೇಮಠ ಹಾಗೂ ತಪೋವನದ ಡಾ. ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳು ಬೆನ್ನುಡಿಯನ್ನು ಬರೆದು ಕೃತಿಯನ್ನು ಆಶೀರ್ವದಿಸಿದ್ದಾರೆ.
ಈ ಕೃತಿಯಲ್ಲಿ ಸಾಹಿತ್ಯ, ಶಿಕ್ಷಣ, ಜೀವನಮೌಲ್ಯಗಳು, ರಾಷ್ಟ್ರೀಯತೆ, ಯೋಗ ಮತ್ತು ಆರೋಗ್ಯ, ಕಲೆ, ಪ್ರಕೃತಿ ಹಾಗೂ ವಿಜ್ಞಾನ ಸೇರಿದಂತೆ ಹಲವಾರು ವಿಷಯಗಳನ್ನು ಒಳಗೊಂಡ ಕನ್ನಡ ಮತ್ತು ಇಂಗ್ಲೀಷ್ ಭಾಷೆಯ ವಿದ್ವತ್ಪೂರ್ಣ ಲೇಖನಗಳಿವೆ. ಚಿಂತಕರಾದ ನಾರಾಯಣ ಶೇವಿರೆ, ಡಾ. ನವೀನ್ ಭಟ್ ಗಂಗೋತ್ರಿ, ರಾಧಾಕೃಷ್ಣ ಕಲ್ಚಾರ್, ಡಾ. ಆರತಿ ಪಟ್ರಮೆ, ಮಂಜುನಾಥ್ ಅಜ್ಜಂಪುರ, ಡಾ. ಸುಧಾಕರ ಹೊಸಳ್ಳಿ, ಡಾ. ನಾ. ಸೋಮೇಶ್ವರ, ಗಣರಾಜ ಕುಂಬ್ಳೆ, ಡಾ. ನಾಗೇಂದ್ರ ಸಿಂಗ್ ಸೇರಿದಂತೆ ಅನೇಕ ಹಿರಿಯರ ಬರಹಗಳು ಈ ಕೃತಿಯಲ್ಲಿ ಸಂಗ್ರಹಗೊಂಡಿವೆ.
ಭೌತಶಾಸ್ತ್ರದ ವೈಶಿಷ್ಟ್ಯಪೂರ್ಣ ದೃಷ್ಟಿಕೋನ, ನೈಸರ್ಗಿಕ ಕೃಷಿ, ಯಕ್ಷಗಾನದ ಮಹತ್ವ, ನಿಜ ಇತಿಹಾಸದ ಘಟನೆಗಳು, ಷೋಡಶ ಸಂಸ್ಕಾರಗಳು, ಮಂಕುತಿಮ್ಮನ ಕಗ್ಗದ ಜೀವನದರ್ಶನ, ಸಂಸ್ಕೃತ ಭಾಷೆಯ ವೈಶಿಷ್ಟ್ಯ ಮುಂತಾದ ವಿಭಿನ್ನ ವಿಷಯಗಳನ್ನು ಒಳಗೊಂಡ ಸಮಗ್ರ ಕೃತಿ ಇದಾಗಿದೆ
Binding
Soft Bound
Author
Yogeesh Theerthapura and Dr Vineeth Kumar T V and Panduranga Narayana
Number of Pages
200
Publisher
Ayodhya Publications
Publication Year
2026
Height
2 CMS
Length
22 CMS
Weight
300 GMS
Width
14 CMS
Language
Kannada