Quantity
Product Description
ಪ್ರಸ್ತುತ ಜಗತ್ತಿನಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಪಟ್ಟಿರುವವರು ಬಾಬಾಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಎಂದರೆ ಅತಿಶಯೋಕ್ತಿಯಾಗಲಾರದು. ಧನಂಜಯ್ ಕೀರ್ ಅವರ 'ದಿ ಲೈಫ್ ಆ್ಯಂಡ್ ಮಿಷನ್ ಆಫ್ ಡಾ.ಬಿ.ಆರ್. ಅಂಬೇಡ್ಕರ್' ಪುಸ್ತಕವನ್ನು ನಾನಕ್ ಚಂದ್ ರತ್ತು ಅವರು ತಂದು ತೋರಿಸಿದಾಗ ಅಂಬೇಡ್ಕರ್ "ಇದು ಸಮಗ್ರವಾದ ಕೃತಿಯಲ್ಲ. ಅವರು ಬರೆಯದೇ ಇರುವ ಅನೇಕ ಸಂಗತಿಗಳು ಇನ್ನೂ ಉಳಿದುಕೊಂಡಿವೆ..... ಬರೆಯಬೆಕಾದದ್ದು ಇನ್ನೂ ಬಹಳಷ್ಟಿದೆ" ಎಂದಿದ್ದರಂತೆ. ಡಾ. ಅಂಬೇಡ್ಕರ್ ಅವರಂಥ ವೋಮಮೂರ್ತಿಯನ್ನು ಒಂದು ಮಗ್ಗುಲಿನಿಂದ ನೋಡಿದರೆ ಸಾಲದು. ಬಹುಮುಖೀ ಪರಿಪ್ರೇಕ್ಷ್ಯದಿಂದಲೇ ನೋಡಬೇಕೆನಿಸುತ್ತದೆ. ಬಹುಕಾಲದ ಒಡನಾಡಿಯಗಿದ್ದ ನಾನಕ್ ಚಂದ್ ರತ್ತು ಸ್ಮೃತಿ - ಸಂಸ್ಕೃತಿ ಬರೆದು ಉತ್ತಮ ಕಾರ್ಯವನ್ನೇ ಮಾಡಿದ್ದಾರೆ. ಇದರ ನಂತರವೂ ಅನೇಕರು ಅಂಬೇಡ್ಕರ್ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಅವುಗಳಲ್ಲಿ ದೇವಿದಯಾಳ್ ಅವರ 'ಡಾ. ಬಾಬಾಸಾಹೇಬ್ ಅಂಬೇಡ್ಕರ್ ದಿನಚರಿ' ಮತ್ತು ಡಾ. ಸವಿತಾ ಅಂಬೇಡ್ಕರ್ ಅವರ 'ಅಂಬೇಡ್ಕರ್ ಸಹವಾಸದಲ್ಲಿ' ಮುಖ್ಯವಾದವು. ಇವುಗಳಲ್ಲಿ ಅಂಬೇಡ್ಕರ್ ಕುರಿತ ಹೊಸ ಹೊಸ ವಿಚಾರಗಳು ಮೂಡಿಬಂದಿವೆ. ಇಂಗ್ಲಿಷಿನಲ್ಲಿ ಪೈಪೋಟಿಗೆ ಬಿದ್ದವರಂತೆ ಬಾಬಾಸಾಹೇಬರನ್ನು ಕುರಿತು ಅನೇಕರು ಉದ್ಧಂಥಗಳನ್ನು ಬರೆಯುತ್ತಿದ್ದಾರೆ. “ಅಂಬೇಡ್ಕರ್: ಸ್ಮೃತಿ- ಸಂಸ್ಕೃ - ಸಂಸ್ಕೃತಿ" ಒಂದು ಅಮೂಲ್ಯ ಗ್ರಂಥವಾಗಿದೆ. ಸಂಸ್ಕೃತಿ ವಿಭಾಗದಲ್ಲಿ ಅಂಬೇಡ್ಕರ್ ಅವರ ನಿಕಟವರ್ತಿಗಳಾಗಿದ್ದ ಮುಲ್ಕರಾಜ್ ಆನಂದ್, ಯು. ಆರ್. ರಾವ್, ಜೋಗೇಂದರನಾಥ್ ಮಂಡಲ್, ಎಂ. ಓ. ಮಥಾಯ್ ಮುಂತಾದವರು ಅಂಬೇಡ್ಕರ್ ತಮ್ಮ ಸಹವಾಸಕ್ಕೆ ಬಂದ ಬಗೆ ಮತ್ತು ಆದ ಅನುಭವಗಳನ್ನು ಹಂಚಿಕೊಂಡಿರುವುದು ವಿಶೇಷವಾಗಿದೆ. ರಾಹು ಯಾನೆ ಆರ್. ಕೆ. ಹುಡಗಿ ದೈತ್ಯ ಓದುಗರು ಮತ್ತು ಬರಹಗಾರರು. ಅನುವಾದದಲ್ಲಿ ಪಳಗಿರುವ ಅವರ ಲೇಖನಿ ಕನ್ನಡದ ನೆಲಕ್ಕೆ ಒಗ್ಗುವಂತೆ ಅಕ್ಷರಗಳನ್ನು ಪಡಿಮೂಡಿಸಿದೆ. ಪರಿಷ್ಕೃತ ಮುದ್ರಣಕ್ಕೆ ಹೊರಟಿರುವ ಈ ಕೃತಿ ಯಶಸ್ಸಿನ ಶಿಖರಕ್ಕೇರಲಿ ಎಂದು ಹಾರೈಸುತ್ತೇನೆ. ಡಾ. ಮೂಡ್ನಾಕೂಡು ಚಿನ್ನಸ್ವಾಮಿ
Binding
Soft Bound
Author
Nanak Chand Rattu and Rahu
Number of Pages
200
Publisher
Sumedha Publications
Publication Year
2025
Height
2 CMS
Length
22 CMS
Weight
500 GMS
Width
14 CMS
Language
Kannada