Product Description
ಸುಮಾರು ಮೂರುವರೆ ಶತಮಾನಗಳಷ್ಟು ಧೀರ್ಘಕಾಲ ಭಾರತದಲ್ಲಿದ್ದ ಬ್ರಿಟಿಷರು ತಾವಿದ್ದಷ್ಟು ಕಾಲವು ಬಗೆ ಬಗೆಯಾಗಿ ಇಲ್ಲಿಯ ಸಂಪತ್ತನ್ನು ಸೂರೆಗೊಂಡರು. ಮೊದಮೊದಲು ವ್ಯಾಪಾರದ ಹೆಸರಿನಲ್ಲಿ, ಕ್ರಮೇಣ ಮೋಸ-ವಂಚನೆಗಳಿಂದ, ಕೊನೆಗೆ ಅಧಿಕಾರದ ದರ್ಪ ತೋರಿ, ಭಾರತೀಯರನ್ನು ಹಿಂಡಿ ಹಿಪ್ಪೆ ಮಾಡಿದರು. ಇಲ್ಲಿಯ ಸಂಪತ್ತನ್ನು ಹಡಗುಕಟ್ಟೆಗಳಿಗೆ ಸಾಗಿಸುವುದಕ್ಕಗಿಯೇ ದಏಶದ ಮೂಲೆಮೂಲೆಗಳಿಗೂ ಸಂಪರ್ಕಕಲ್ಪಿಸುವ ರಸ್ತೆಗಳನ್ನು ರೂಪಿಸಿದರು; ತಮಗೆ ಬೇಕಾದೆಡೆ ರೈಲುಮಾರ್ಗಗಳ ನಿರ್ಮಾಣ ಮಾಡಿದರು. ಬ್ರಿಟನ್ನಿನ ಅಂದಿನ ವೈಭವವೆಲ್ಲ ಭಾರತೀಯರ ಬೆವರಿನ ಫಲ; ಆ ವಿಲಾಸ-ವೈಭ್ಹೊಗಗಳಿಗೆ ರಂಗುತಂಬಿದ್ದು ಬ್ರಿಟಿಷರು ಹೀರಿದ ಭಾರತೀಯರ ರಕ್ತ.