Select Size
Quantity
Product Description
ಈ ಸಂಕಲನದ ಪ್ರತಿ ಕತೆಯೂ ತನ್ನಂತರಾಳದ ಸರಳ ಸೌಂದರ್ಯದಿಂದಲೇ ನಮ್ಮ ಗಮನವನ್ನು ವಿಶೇಷವಾಗಿ ಸೆಳೆಯುವಂತಿವೆ. ಹೊಸ ನಮೂನಿಯ ರಚನೆ, ಪ್ರಯೋಗಗಳಿದ್ದರೂ, ಹೇರಿಕೆಯಾಗುವಷ್ಟು ತಂತ್ರಗಾರಿಕೆಯಾಗಲೀ, ಭಾಷಾ ಆಡಂಬರವಾಗಲೀ ಅಷ್ಟಾಗಿ ಕಾಣದೇ, ತನ್ನ ಸಹಜತೆ ಹಾಗೂ ಆತ್ಮೀಯ ಧಾಟಿಯ ಆಪ್ತತೆಯಿಂದ ‘ಇವು ನಮ್ಮ ಕತೆ’ ಎನ್ನುವಷ್ಟು ಸಲೀಸಾಗಿ ನಮ್ಮೊಳಗೆ ಇಳಿದುಬಿಡುತ್ತವೆ. ಈಗಾಗಲೇ ಅನೇಕ ಕತೆ, ಕಾದಂಬರಿಗಳನ್ನು ಕನ್ನಡದಿಂದ ತಮಿಳಿಗೂ, ತಮಿಳಿನಿಂದ ಕನ್ನಡಕ್ಕೂ ಅನುವಾದಿಸುತ್ತಾ ಬಂದಿರುವ ಕೆ. ನಲ್ಲತಂಬಿಯವರ ಅಕ್ಷರ ಪ್ರೀತಿ ಪುಟ ಪುಟದಲ್ಲೂ ತುಂಬಿದೆ. ಅನುವಾದವೆಂಬ ಅಸಾಧಾರಣ ಕಾರ್ಯವನ್ನೇ ಸದಾ ಧೇನಿಸುತ್ತಾ ಪ್ರತಿ ಅಕ್ಷರವನ್ನೂ ಅತ್ಯಂತ ಅಕರಾಸ್ಥೆಯಿಂದ ಅವಾಹಿಸಿಕೊಂಡು ಒಂದೊಂದು ಹೂವಿನ ಸುಗಂಧವನ್ನು ಜೋಪಾನದಲ್ಲಿ ಕಾಪಿಟ್ಟು ಸುಮಧುರ ದಂಡೆಯನ್ನೇ ಕಟ್ಟಿ ನಮ್ಮ ಮುಂದಿಟ್ಟು ಬಿಟ್ಟಿದ್ದಾರೆ.
-ಜಯಶ್ರೀ ಕಾಸರವಳ್ಳಿ.
Weight
300 GMS
Length
22 CMS
Author
K Nallathambi
Publisher
Panchami Media Publications
Publication Year
2023
ISBN-10
9788196026844
Number of Pages
125
Binding
Soft Bound
Language
Kannada