Quantity
Product Description
ವಿಶೇಷ ಶಿಕ್ಷಣ ಕ್ಷೇತ್ರದಲ್ಲಿ ಒಂದು ದಶಕದ ಅನುಭವ ಉಮೇಶ್ ಅವರದ್ದು. ಶ್ರವಣದೋಷವುಳ್ಳ ಮಕ್ಕಳ ಸರ್ಕಾರಿ ಶಿಕ್ಷಕರ ತರಬೇತಿ ಕೇಂದ್ರದಲ್ಲಿ 2011ರಿಂದಲೂ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಇವರು, ವಿಶೇಷ ಶಿಕ್ಷಣ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಕಾರ್ಯಗಾರಗಳಲ್ಲಿ ಸಂಶೋಧನಾ ಲೇಖನಗಳನ್ನು ಮಂಡಿಸಿದ್ದಾರೆ. ತಮ್ಮ ಬ್ಲಾಗ್ ಮೂಲಕ ವಿಶೇಷ ಶಿಕ್ಷಣ ಕುರಿತು ಅನೇಕ ಲೇಖನಗಳನ್ನು ಪ್ರಕಟಿಸಿದ್ದಾರೆ. 'ವಿಕಲತೆಗಳ ಪರಿಚಯ' ಪುಸ್ತಕದಿಂದ ಪುಸ್ತಕಲೋಕ ಪ್ರವೇಶಿಸಿದ ಉಮೇಶ್, ಮೊದಲ ಪುಸ್ತಕಕ್ಕೆ ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಶ್ರೇಷ್ಠ ಪುಸ್ತಕ (2022) ಪ್ರಶಸ್ತಿ ಪಡೆದಿದ್ದಾರೆ.
ಈ ಪುಸ್ತಕದಿಂದ ವಿಶೇಷ ಹಾಗೂ ಸಾಮಾನ್ಯ ಡಿ.ಎಡ್/ ಬಿ.ಎಡ್/ಎಂ.ಎಡ್ ಮತ್ತು ಎಂ.ಎಸ್.ಡಬ್ಲೂ ವಿದ್ಯಾರ್ಥಿಗಳು, ಟಿ.ಇ.ಟಿ ಹಾಗೂ ಕೆ.ಇ.ಎಸ್ ಅಭ್ಯರ್ಥಿಗಳು ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬಹುದು. ವಿಕಲಚೇತನರ ಪೋಷಕರು, ವಿಕಲಚೇತನರ ಪುನರ್ವಸತಿ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಆಶಾಕಾರ್ಯಕರ್ತರು, ಇಲಾಖಾ ಪರೀಕ್ಷೆಯನ್ನು ಬರೆಯುತ್ತಿರುವ ಉದ್ಯೋಗಿಗಳಿಗೂ ಈ ಪುಸ್ತಕ ಹೆಚ್ಚು ಅನುಕೂಲಕರವಾಗಿದೆ.
Author
D Umesha
Binding
Soft Bound
Number of Pages
152
Publication Year
2020
Publisher
TechFiz Inc
Height
2 CMS
Length
22 CMS
Weight
200 GMS
Width
14 CMS
Language
Kannada