Select Size
Quantity
Product Description
ಆರೆಸ್ಸೆಸ್ನ ಚಿಂತನೆ ದೇಶದಲ್ಲಿ ಗಟ್ಟಿಯಾಗುತ್ತಿರುವಂತೆಯೇ ವಿಜ್ಞಾನ ಪುರಾಣಗಳ ನಡುವೆ ಕಲಬೆರಕೆ ಆರಂಭವಾಗುತ್ತಿದೆ. ಪುರಾಣದ ರೂಪಕಗಳನ್ನೆಲ್ಲ ವಾಸ್ತವಕ್ಕಿಳಿಸಿ, ಅದನ್ನೇ ವಿಜ್ಞಾನ ಎಂದು ಕಲಿಸಿಕೊಡುವ ಹೊಸತೊಂದು ಶಿಕ್ಷಣ ದೇಶಾದ್ಯಂತ ಬೆಳೆಯುತ್ತಿದೆ. ಭಾರತದ ಪ್ರಾಚೀನತೆಯ ವೈಭವವನ್ನು ಸಾರುವ ನೆಪದಲ್ಲಿ ವಿಜ್ಞಾನಕ್ಕೆ ಅಪಮಾನ ಮಾಡುವ ಕೆಲಸಗಳು ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿದೆ. ಇತ್ತೀಚೆಗೆ, ಪುರಾತನ ಕಾಲದಲ್ಲೇ ಭಾರತದಲ್ಲಿ ವಿಮಾನಗಳಿದ್ದವು ಎನ್ನುವುದನ್ನು ಕೆಲವರು ವಾದಿಸುತ್ತಿದ್ದಾರೆ. ಅದಕ್ಕೆ ರಾಮಾಯಣದಲ್ಲಿ ಬರುವ ಪುಷ್ಪಕ ವಿಮಾನ ಕಲ್ಪನೆಯನ್ನು ಉದಾಹರಣೆಯಾಗಿ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಿ. ಶ್ರೀನಿವಾಸ ಮೂರ್ತಿ ಅವರು ಬರೆದಿ ರುವ ವಿಮಾನ ವಿಜ್ಞಾನ ನಮ್ಮಲ್ಲಿರುವ ತಪ್ಪು ಕಲ್ಪನೆಗಳನ್ನು ನಿವಾರಿಸುತ್ತದೆ ಮಾತ್ರವಲ್ಲ, ವಿಮಾನ ಹಾರಿದ ಕೌತುಕ ಹಂತಗಳನ್ನು ವಿವರಿಸುತ್ತದೆ. ಮುನ್ನುಡಿಯಲ್ಲಿ ಹೇಳುವಂತೆ ವಿಮಾನದ ಇತಿಹಾಸ, ವಿಮಾನದ ಏರುವಿಕೆ, ಏರುಬಲ, ಒತ್ತಡ, ಹಾರಾಟ ನಿಯಂತ್ರಣಾ ವ್ಯವಸ್ಥೆ, ವಿಮಾನದ ಸ್ಥಿರ ಹಾಗೂ ಅಸ್ಥಿರ ಸ್ಥಿತಿಗಳು, ವಿಮಾನದ ಭಾಗಗಳು ಮತ್ತು ಅವುಗಳ ಕಾರ್ಯಗಳು ಮುಂತಾದ ಅನೇಕ ಉಪಯುಕ್ತ ವಿಚಾರಗಳನ್ನು, ಅತ್ಯಂತ ಸೂಕ್ತ ವಾದ ಚಿತ್ರಗಳೊಡನೆ ವಿಜ್ಞಾನ ಕ್ಷೇತ್ರದ ಪರಿಚಯವೇ ಇಲ್ಲದ ಸಾಮಾನ್ಯ ಓದುಗರಿಗೂ ಚೆನ್ನಾಗಿ ಮನನವಾಗುವಂತೆ ಸರಳವಾಗಿ ಈ ಪುಸ್ತಕದಲ್ಲಿ ತಿಳಿಸಿಕೊಡಲಾಗಿದೆ.
Weight
100 GMS
Length
22 CMS
Width
14 CMS
Height
2 CMS
Author
G Srinivas Murthy
Publisher
Nava Karnataka Publications Pvt Ltd
Publication Year
2014
Number of Pages
100
Binding
Soft Bound
Language
Kannada