Select Size
Quantity
Product Description
ಉಸಿರಾಟ - ಇದು ಜೀವಂತಿಕೆಗೆ ಸಾಕ್ಷಿಯಾದ ದೇಹದಲ್ಲಿನ ಕ್ರಿಯೆ. ಜೀವನಪರ್ಯಂತ ನಿರಂತರ. ನಮ್ಮಲ್ಲಿ ಪಂಚ ಭೌತಿಕಗಳ ಕಲ್ಪನೆಯಿದೆ. ನೀರು-ಗಾಳಿ-ಮಣ್ಣು-ಆಕಾಶ-ಅಗ್ನಿಗಳ ತತ್ವಾಧಾರಿತ ದೇಹ ನಮ್ಮದು. ಹಾಗಾಗಿ ಭೂಮಿಯಲ್ಲಿನ ಜೀವಿಗಳಿಗೆಲ್ಲ ಸಂಚಲನವಿದ್ದೇ ಇದೆ. ಉಸಿರಾಡಲು ನಮಗೆ ಶುದ್ಧಗಾಳಿ ಬೇಕು. ಶ್ವಾಸಕೋಶ ಎಂಬ ಅಂಗವು ನಮ್ಮ ಉಸಿರಾಟದ ವ್ಯವಸ್ಥೆಯಲ್ಲಿ ನೇರ ಭಾಗಿಯಾಗುತ್ತದೆ. ಆದರೆ ಜೀವಿ ವೈವಿಧ್ಯಗಳಿರುವ ಜಗತ್ತಿನಲ್ಲಿ ಉಸಿರಾಟದ ವ್ಯವಸ್ಥೆಯು ಒಂದೇ ರೀತಿಯಾಗಿರುವುದಿಲ್ಲ. ಆಮ್ಲಜನಕವಿಲ್ಲದೆಯೂ ಕೆಲವೊಂದು ಜೀವಿಗಳು ಉಸಿರಾಡಬಲ್ಲವು. ಜಲಚರಗಳು ನೀರಿನಲ್ಲಿದ್ದೇ ಉಸಿರಾಡಬಲ್ಲವು. ಭೂಮಿಯ ಮೇಲೆ ಜೀವಿಸುವ ಲಕ್ಷಾಂತರ ಜೀವಜಂತುಗಳು ಉಸಿರಾಡುವ ಕ್ರಿಯೆಯೂ ಭಿನ್ನ. ಉಸಿರಾಟದ ಅಂಗಗಳನ್ನು ತಮ್ಮ ಅನುಕೂಲಕ್ಕೆ ಮತ್ತು ವಾತಾವರಣಕ್ಕೆ ಮಾರ್ಪಡಿಸಿಕೊಂಡು ನಿಗೂಢತೆಗೆ ಸಾಕ್ಷಿಯಾಗಬಲ್ಲ ಹಲವಾರು ಉದಾಹರಣೆಗಳಿವೆ. ವಿಜ್ಞಾನಕ್ಷೇತ್ರದಲ್ಲಿ ಉಸಿರಾಟದ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿವೆ. ವೈದ್ಯಕೀಯ ಕ್ಷೇತ್ರ ಎಷ್ಟು ಮುಂದುವರಿದಿದೆಯೆಂದರೆ ಕೃತಕ ಉಸಿರಾಟದ ವ್ಯವಸ್ಥೆಯಿಂದ ಅಪಾಯದ ಅಂಚಿನಲ್ಲಿರುವ ರೋಗಿಯನ್ನು ಬದುಕಿಸಲೂ ಶಕ್ತವಾಗಿದೆ. ಈ ಎಲ್ಲ ಹಿನ್ನೆಲೆಗೂ ಕಾರಣಕರ್ತರಾದ ವಿಜ್ಞಾನಿಗಳ ಪರಿಚಯವೂ ಈ ಪುಸ್ತಕದಲ್ಲಿದೆ.
Weight
200 GMS
Length
22 CMS
Width
14 CMS
Height
2 CMS
Author
Dr N S Leela
Publisher
Nava Karnataka Publications Pvt Ltd
Publication Year
2014
Number of Pages
108
ISBN-13
9788184674484
Binding
Soft Bound
Language
Kannada