Product Description
ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದಿಂದಾಗಿ ನಗರ-ಹಳ್ಳಿಗಳೂ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿವೆ. ಆದರೂ ಮಳೆಯನ್ನೇ ಅವಲಂಬಿಸಿಕೊಂಡಿರುವ ಚಿಕ್ಕ ರೈತರ ಬದುಕಿನಲ್ಲಿ ಅಂಥ ಬದಲಾವಣೆ ಏನೂ ಆಗಲಿಲ್ಲ. ಅವನ ಆಶೆ-ಆಕಾಂಕ್ಷೆಗಳೆಲ್ಲ ಇಂದಿಗೂ ಮಳೆಯನ್ನೂ, ಫಸಲನ್ನೂ ಅವಲಂಬಿಸಿದೆ. ಹೆಂಡತಿ ಮಕ್ಕಳ ಹೊಟ್ಟೆಗೆ, ಬಟ್ಟೆಗೆ, ಶಿಕ್ಷಣಕ್ಕೆ ನಾಲ್ಕು ದುಡ್ಡು ಉಳಿಯಲಿ ಎನ್ನುವುದೇ ಅವನ ಕನಸು. ಆದರೆ ಕಳೆದ ಕೆಲವು ವರ್ಷಗಳಲ್ಲಿ ದೇಶದ ಆರ್ಥಿಕ ವ್ಯವಸ್ಥೆಯೇ ಬದಲಾಗಿದೆ. ಹವಾಮಾನ, ಋತುಮಾನ ಎಲ್ಲವೂ ಲಯ ತಪ್ಪಿದೆ. ಅದರ ಪರಿಣಾಮ ಕೃಷಿಯ ಮೇಲಾಗುತ್ತಿದೆ. ನಿಸರ್ಗದ ಪ್ರಹಾರದಿಂದ ರೈತ ಹತಬಲನಾಗುತ್ತಿದ್ದಾನೆ. ಮನೆ-ಹೊಲಕ್ಕಾಗಿ ಸಾಲ ಮಾಡಬೇಕಾಗುತ್ತದೆ. ಸಾಹುಕಾರರಿಂದ, ಸರಕಾರದಿಂದ ಪಡೆದ ಸಾಲವೇ ಉರುಳಾಗಿ ಹೊಲ ಕಳಕೊಳ್ಳುವ ಸ್ಥಿತಿ ಬಂದು ರೈತನ ಕನಸು ನುಚ್ಚು ನೂರಾಗುತ್ತದೆ. ಮನುಷ್ಯ ಜೀವನದ ಅನಿಶ್ಚಿತತೆ, ಹತಬಲವನ್ನು ಈ ಕೃತಿಯಲ್ಲಿ ಹಿಡಿದಿಡಲಾಗಿದೆ. ಒಂದು ರೈತ ಕುಟುಂಬದ ಮೇಲೆ ಬೀಳುವ ಆಘಾತ, ಕುಗ್ಗುವ ಆಯುಷ್ಯ, ಉಧ್ವಸ್ತಗೊಳ್ಳುವ ಕನಸು, ಇದೆಲ್ಲವನ್ನೂ ನಮ್ಮ ಮರಾಠಿ ಲೇಖಕ ಆನಂದ ವಿಂಗಕರ ತುಂಬ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಆತ್ಮಹತ್ಯೆಯು ಕಾದಂಬರಿಯ ಕೇಂದ್ರಬಿಂದುವಾದರೂ ಮಾನವೀಯತೆ, ಬದುಕಿನ ವಿವಿಧ ಮಗ್ಗಲುಗಳು ಸೂಚ್ಯವಾಗಿ ತೆರೆದುಕೊಳ್ಳುತ್ತವೆ.