Quantity
Product Description
ಕವಿ ಪುತಿನರಂಥವರನ್ನೇ ಮರುಳು ಮಾಡಿದ ಬೆಟ್ಟವಿದು. ಇಲ್ಲಿ ನಿಂತರೆ ಕಾಣುವ 'ಚಣಕೂ ಬೆದರುವ ಮೋಡದ ಮಂದೆ'ಯನ್ನು ನೋಡುತ್ತಾ ನಿಂತರೆ ಕಾಲ ಚಲಿಸುವುದಿಲ್ಲ. ಈ ತಾಣದ ಮಳೆ ಬಿಸಿಲು ನೆಲ ಮುಗಿಲು ನೀರು ಮಂಜು ಬೆಳಗು ಸಂಜೆ ಹಗಲು ಇರುಳುಗಳೆಲ್ಲವೂ ಅನನ್ಯ. ಇಲ್ಲಿನ ಗಾಳಿಯಲ್ಲಿ ಸದಾ ಒಲವು ತೇಲಾಡುತ್ತದೆ. ಪುತಿನರ ಮಾತಿನಲ್ಲೇ ಹೇಳುವುದಾದರೆ 'ದಣಿದಾತ್ಮದ ಬಳಿಗೈತರೆ-ಅಹ ಏನುತ್ಸವವೋ ಮಲೆ ಮೇಲುಗಡೆ!' ಛಾಯಾಗ್ರಾಹಕ ಡಿ ಜಿ ಮಲ್ಲಿಕಾರ್ಜುನರ ಈ ಕೃತಿಯಲ್ಲಿ ನಂದಿಬೆಟ್ಟದ ದೃಶ್ಯವೈಭವವಷ್ಟೇ ಅಲ್ಲದೆ, ಈ ಪ್ರಾಂತ್ಯದ ಇತಿಹಾಸ, ಪುರಾಣ, ಜನಪದ ಮಗ್ಗಲುಗಳ ದರ್ಶನವೂ ಆಗುವುದು ವಿಶೇಷ. ನಂದಿ ಬೆಟ್ಟದಲ್ಲಿ ಅದನ್ನು ಆಳಿದ ರಾಜಮನೆತನಗಳ ಕುರುಹುಗಳಿವೆ, ಹೈದರ್ ಅಲಿ, ಟಿಪ್ಪು, ವಿದೇಶೀಯರು ಮತ್ತು ಮಹಾತ್ಮರ ಹೆಜ್ಜೆ ಗುರುತುಗಳಿವೆ. ನಿಸರ್ಗ ಸೌಂದರ್ಯ, ಸಸ್ಯ ಸಂಪತ್ತು, ಕೀಟ ಮತ್ತು ಹಕ್ಕಿಗಳ ಆರ್ಕೆಸ್ಟ್ರಾ ಕೂಡ ಇಲ್ಲಿದೆ; ಇವೆಲ್ಲವನ್ನೂ ಕಂಡು ಮನಮುಟ್ಟುವಂತೆ ವಿವರಿಸುವ ಕಣ್ಣು ಮತ್ತು ಭಾಷೆ ಮಲ್ಲಿಕಾರ್ಜುನರಿಗೆ ಒಲಿದಿವೆ. ಹಾಗಾಗಿ ಅವರ ಕೈಹಿಡಿದು ನಂದಿಬೆಟ್ಟವನ್ನೇರಿದರೆ ನಿಮಗೆ ದಣಿವಾಗದು.
Binding
Soft Bound
Number of Pages
150
Publisher
Nava Karnataka Publications Pvt Ltd
Publication Year
2026
Author
Mallikarjun D G
ISBN-13
9789347764769
Height
2 CMS
Weight
200 GMS
Width
14 CMS
Length
22 CMS
Language
Kannada