Quantity
Product Description
ಬುದ್ದನನ್ನು ಅರಿಯಲು ಎರಡು ಮಾರ್ಗಗಳು: ಒಂದು, ಬೌದ್ಧ ತತ್ತ್ವಗಳ ಮೂಲಕ ಅರಿಯುವುದು; ಮತ್ತೊಂದು. ಬುದ್ಧನ ಬದುಕನ್ನು ತಿಳಿಯುವುದು. ಮೊದಲ ಮಾರ್ಗ ಪಂಡಿತವರ್ಗದ್ದು, ಮೀಮಾಂಸಕರದು. ಬುದ್ಧನನ್ನು ಆತನ ಬದುಕಿನ ಘಟನಾವಳಿಗಳ ಮೂಲಕ ಪ್ರವೇಶಿಸುವುದು ಜನಸಾಮಾನ್ಯರ ಮಾರ್ಗ. ಈ ಜನಸಾಮಾನ್ಯರ ಪಥವೇ ಬುದ್ಧನನ್ನು ಉಳಿಸಿಕೊಂಡಿರುವುದು. ಕಂನಾಡಿಗಾ ನಾರಾಯಣ ಅವರ 'ಬುದ್ಧಯಾನ' ಜನಸಾಮಾನ್ಯರೊಂದಿಗೆ ಸಹಪಯಣ ನಡೆಸುವ ಮಾದರಿಯದು. ನಮ್ಮ ಭಾವಕೋಶದಲ್ಲಿ ನಮಗರಿವಿಲ್ಲದಂತೆಯೇ ಸೇರಿಕೊಂಡ ಬುದ್ಧಬಿಂಬಗಳನ್ನು ನಿಚ್ಚಳಗೊಳಿಸುವ ಮೂಲಕ, ಮಾನವೀಯತೆಯ ಬಹುದೊಡ್ಡ ಮೂರ್ತರೂಪವನ್ನು ನಮಗೆ ಕಾಣಿಸುವ ಪ್ರಯತ್ನ ಈ ಯಾನದ್ದು. ಬುದ್ಧಕಥನದ ಈ ಪಯಣ, ಬದುಕಿನ ಕುರಿತ ನಮ್ಮ ನಿರೀಕ್ಷೆ ಮತ್ತು ನಂಬಿಕೆಗಳನ್ನು ಸಾಪುಗೊಳಿಸಿ ಆದ್ರ್ರಗೊಳಿಸುವಂತಿದೆ. ಮೋಕ್ಷವನ್ನು ಹುಡುಕುತ್ತಾ ಪ್ರೀತಿಯ ಬಂಧನದಲ್ಲಿ' ಸಿಲುಕಿದ ಕರುಣಾಳುವಿನ ಕಥನದಲ್ಲಿ ಈ ಹೊತ್ತಿನ ಬಿಕ್ಕಟ್ಟುಗಳಿಗೆ ಉತ್ತರವಾಗಬಹುದಾದ ಮಮತೆಯ ಮಾರ್ಗದರ್ಶನವಿದೆ. ಬುದ್ಧ ಮಾನವೀಯತೆಯ ರೂಪದ ಬೆಳದಿಂಗಳ ಸಮುದ್ರ, ಆ ಕಡಲನ್ನು ಮಿನಿಯೇಚರ್ ರೂಪದಲ್ಲಿ ಕಂನಾಡಿಗಾ ನಾರಾಯಣ ತೋರಿಸುತ್ತಿದ್ದಾರೆ. ಕಡಲ ಸೌಂದರ್ಯ ಮತ್ತು ಗಾಂಭೀರ್ಯದಲ್ಲಿ ಮೈಮರೆಯದೆ, ಬುದ್ಧಸಾಗರವನ್ನು ರೂಪಿಸಿದ ತೊರೆಗಳನ್ನೂ ಕಾಣಿಸುವುದು ಈ ಕಾದಂಬರಿಯ ವಿಶೇಷ. ಬುದ್ಧಮಾರ್ಗದಲ್ಲಿ ಎದುರಾದ ಸವಾಲು, ಸಂಕಟ, ಹಸಿವು, ಕಣ್ಣೀರು, ವಿರೋಧ, ಅಪರಿಮಿತ ಪ್ರೇಮಗಳೆಲ್ಲವೂ ನಮ್ಮ ಬದುಕಿನ ಪ್ರತಿಬಿಂಬಗಳಂತೆಯೇ ಕಾಣಿಸುವುದರಿಂದಾಗಿ ಕೃತಿ ಆಪ್ತವೆನ್ನಿಸುತ್ತದೆ. ಇಲ್ಲಿನ ಬುದ್ಧ ದೈವವಲ್ಲ; ಸಾಮಾನ್ಯ ಮನುಷ್ಯನೊಬ್ಬ ಪ್ರೇಮಮಾರ್ಗದ ಮೂಲಕ ಮುಟ್ಟಬಹುದಾದ ಶೃಂಗ. ಪ್ರೇಮಭಿಕ್ಷುವಿನ ಕಥೆಯ ಮೂಲಕ ಕಾದಂಬರಿಕಾರ ಕಂನಾಡಿಗಾ ಅವರ ಕಥನನುಡಿ ಹೊಸತೊಂದು ಮಗ್ಗುಲಿಗೆ ಹೊರಳಿದೆ; ಮಹಾಗುರುವಿನ ಸರಳತೆಯನ್ನು 'ಬುದ್ಧಯಾನ'ದ ಭಾಷೆಯೂ ಒಳಗೊಂಡಿದೆ. ರಘುನಾಥ
Author
Kamnadiga Narayana
Binding
Soft Bound
Number of Pages
150
Publication Year
2025
Publisher
Nava Karnataka Publications Pvt Ltd
Height
2 CMS
Length
22 CMS
Weight
200 GMS
Width
14 CMS
Language
Kannada