ಹನುಮಂತನೆಂದರೆ ಯಾವ ಮಕ್ಕಳಿಗೆ ತಾನೇ ಇಷ್ಟವಿಲ್ಲ! ಧೈರ್ಯ, ಸಾಹಸ, ಬಲ, ದಾಸಭಾವ, ಉತ್ಸಾಹ ಮುಂತಾದ ಎಲ್ಲ ಗುಣಗಳಿಗೆ ಆತ ಸಂಕೇತ. ಹನುಮಂತನ ಬದುಕಿನ ಕತೆ ಎಲ್ಲರಿಗೂ ಸ್ಫೂರ್ತಿದಾಯಕ. ಹಣ್ಣೆಂದು ಭ್ರಮಿಸಿ ಸೂರ್ಯನನ್ನು ಹಿಡಿಯಹೋದ ಬಾಲ್ಯದಿಂದ ಹಿಡಿದು, ಲಂಕೆಯ ಯುದ್ಧದವರೆಗೆ ಹನುಮಂತನು ಬೆಳೆದ ಬಗೆಯು ಅಪೂರ್ವವಾದುದು. ಈ ಕತೆಯನ್ನು 80ಕ್ಕೂ ಹೆಚ್ಚು ದೊಡ್ಡ ಗಾತ್ರದ ಆಕರ್ಷಕ ವರ್ಣಚಿತ್ರಗಳ ಜೊತೆ ಓದುವುದೆಂದರೆ ಅದೊಂದು ವಿಶಿಷ್ಟ ಅನುಭವ ತಾನೆ? ಅಂಥ ಅನುಭವವನ್ನು ಕೊಡುವ ಕೃತಿಯೇ ಅಯೋಧ್ಯಾ ಪಬ್ಲಿಕೇಶನ್ ಪ್ರಕಟಿಸಿದ ‘ಬಲಾಢ್ಯ ಹನುಮ’