Product Description
ನಮ್ಮ ಶರೀರ ನಿಸರ್ಗದ ಒಂದು ಅಂಗ, ನಿಸರ್ಗದ ಸೃಷ್ಟಿ. ಶರೀರದ ಕುಂದು ಕೊರತೆಗಳನ್ನು ನಿವಾರಿಸಿಕೊಳ್ಳಲು, ಅದರ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ನಿಸರ್ಗ ನಮಗೆ ಗಿಡಮೂಲಿಕೆಗಳ, ಖನಿಜ, ಲವಣಗಳ ರೂಪದಲ್ಲಿ ಹಲವಾರು ಉಪಯುಕ್ತ ಸಾಧನಗಳನ್ನು ಕರುಣಿಸಿದೆ. ಇವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿದರೆ, ಇಂದಿನ ಜಲ, ವಾಯು ಹಾಗೂ ಪರಿಸರ ಮಾಲಿನ್ಯದ ಕಲುಷಿತ ವಾತಾವರಣದಲ್ಲಿಯೂ ಶರೀರದ ಆರೋಗ್ಯ ಹಾಗೂ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು. ಈ ಕೃತಿಯಲ್ಲಿ ಗಿಡಮೂಲಿಕೆಗಳಿಂದ ಮನೆಯಲ್ಲೇ ಹೇಗೆ ಸೌಂದರ್ಯ ಸಾಧನಗಳನ್ನು ತಯಾರಿಸಿಕೊಳ್ಳಬಹುದು ಎಂಬುದನ್ನು, ಶರೀರ ಸೌಂದರ್ಯದ ಜತಗೆ ಶರೀರಾರೋಗ್ಯ ಕಾಪಾಡಿಕೊಳ್ಳಲು ಆಯುರ್ವೇದದ ಪ್ರಕಾರ ಅನುಸರಿಸಬೇಕಾದ ಕೆಲವು ಆಚರಣೆಗಳನ್ನು ಸರಳವಾಗಿ ವಿವರಿಸಿದ್ದಾರೆ.