Select Size
Quantity
Product Description
ಈ ಕೃತಿಯು ಸರ್ ಮಿರ್ಜಾ ಇಸ್ಮಾಯಿಲ್ ಒಬ್ಬ ಅಸಾಧಾರಣ ದೂರದರ್ಶಿತ್ವವುಳ್ಳ ವ್ಯಕ್ತಿ ಮತ್ತು ತನ್ನ ಕಾಲವನ್ನು ಮೀರಿ ಆಲೋಚಿಸಬಲ್ಲ ರಾಜಕೀಯ ಮುತ್ಸದ್ದಿ ಎಂಬುದನ್ನು ಸಮರ್ಥವಾಗಿ ಪ್ರತಿಪಾದಿಸುತ್ತದೆ. ಬ್ರಿಟಿಷರ ಮೂಲಭೂತ ಸೈದ್ಧಾಂತಿಕ ವಿರೋಧದ ನಡುವೆಯೂ ಮಹಾತ್ಮಾಗಾಂಧಿ ಹಾಗೂ ರಾಷ್ಟ್ರೀಯತೆಯ ಕುರಿತು ತಮ್ಮ ಅಚಲ ನಿಷ್ಠೆ ಮತ್ತು ಬದ್ಧತೆಯನ್ನು ಬಿಡಲೊಲ್ಲದ ಮಿರ್ಜಾ ಅಂದಿನ ರಾಷ್ಟ್ರ ನಾಯಕರಲ್ಲೇ ತಮ್ಮ ವೈಶಿಷ್ಟ್ಯತೆಯನ್ನು ಮೆರೆಯುತ್ತಾರೆ. ಗಾಂಧಿಯವರ ಕುರಿತು ತಮಗಿರುವ ನಿಷ್ಠೆ ಮಸುಕಾಗಬಾರದೆಂಬ ಕಾರಣದಿಂದ, ಮುಸ್ಲಿಂಲೀಗನ್ನು ಸೇರುವಂತೆ ಮಹಮ್ಮದಾಲಿ ಜಿನ್ನಾರವರು ನೀಡಿದ ಆಹ್ವಾನವನ್ನು ಮಿರ್ಜಾ ನಿರಾಕರಿಸುತ್ತಾರೆ. ಉದ್ದಕ್ಕೂ ಅವರು ಭಾರತದ ವಿಭಜನೆಯ ವಿರುದ್ಧ ಗಟ್ಟಿಯಾಗಿ ನಿಲ್ಲುತ್ತಾರೆ. ಈ ಗ್ರಂಥವು ನಮ್ಮ ಸಾರ್ವಜನಿಕ ಬದುಕನ್ನು ಸೂಕ್ಷ್ಮವಾಗಿ ಪ್ರತಿಫಲಿಸುವ ಕನ್ನಡಿ ಮಾತ್ರವಲ್ಲದೆ ಆ ಕಾಲಘಟ್ಟದಲ್ಲಿ ಸಂಭವಿಸಿದ ಹಲವು ರಾಜಕೀಯ ಘಟನಾವಳಿಗಳ ಅದೆಷ್ಟೋ ಒಳಿತುಗಳನ್ನೂ ಹಾಗೆಯೇ ಅಷ್ಟೊಂದು ಒಳಿತಲ್ಲದ ಇನ್ನೆಷ್ಟೋ ಸಂಗತಿಗಳನ್ನು ಯಥಾರ್ಥವಾಗಿ ಚಿತ್ರಿಸಿದೆ. ಈ ಉತ್ತಮ ಕೃತಿಯ ಮೂಲಕ ನಾಡು, ನುಡಿಗೆ ಅನುಪಮ ಸೇವೆಗೈದ ಒಬ್ಬ ಶ್ರೇಷ್ಠ ವ್ಯಕ್ತಿಯ ಚರಿತ್ರೆಯನ್ನು ಪುನರ್ಮನನ ಮಾಡಲು ಕನ್ನಡ ಓದುಗ ಲೋಕಕ್ಕೆ ಅನುವು ಮಾಡಿಕೊಟ್ಟದ್ದಕ್ಕಾಗಿ ಡಾ. ಗಜಾನನ ಶರ್ಮ ಅಭಿನಂದನಾರ್ಹರು."-ಪದ್ಮಭೂಷಣ ಶ್ರೀ ಎಂ.ಎನ್. ವೆಂಕಟಾಚಲಯ್ಯ
Number of Pages
288
Binding
Soft Bound
Publication Year
2017
ISBN-13
9788193354971
Publisher
Ankitha Pusthaka
Author
Dr Gajaanana Sharma
Genre
Biograohy
Language
Kannada