Product Description
ಸ್ವಾಮಿ ವಿವೇಕಾನಂದರ (1863-1902) ಮೂಲ ಹೆಸರು ನರೇಂದ್ರನಾಥ ದತ್ತ. ಖೇತ್ರಿ ಸಂಸ್ಥಾನದ ಅರಸು ರಾಜಾ ಅಜಿತ್ ಸಿಂಗ್ ಬಹಾದೂರ್ ಯುವಕ ನರೇಂದ್ರನಲ್ಲಿ ಅಧ್ಬುತವಾದ ‘ವಿವೇಕ’ ಹಾಗೂ ‘ಆನಂದ’ ಇರುವುದರಿಂದ ಅವರಿಗೆ ‘ವಿವೇಕಾನಂದ’ ಎಂಬ ಹೆಸರನ್ನು ನೀಡಿದರು. ವಿವೇಕಾನಂದರು ಭಾರತೀಯ ಸನ್ಯಾಸಿ. ರಾಮಕೃಷ್ಣ ಪರಮಹಂಸರ ಪ್ರಧಾನ ಶಿಷ್ಯರು. ‘ರಾಮಕೃಷ್ಣ ಮಠ’ ಹಾಗೂ ‘ರಾಮಕೃಷ್ಣ ಮಿಷನ್’ ಸಂಸ್ಥಾಪಕರು.
ಪಾಶ್ಚಾತ್ಯ ಜಗತ್ತಿಗೆ ‘ವೇದಾಂತ’ ಹಾಗೂ ‘ಯೋಗ’ವನ್ನು ಪರಿಚಯಿಸಿದ ಪ್ರಮುಖರು. ತಮ್ಮ ಚಿಕಾಗೋ ಭಾಷಣದ ಮೂಲಕ ಅಂತರ ಧರ್ಮಗಳ ಅರಿವನ್ನು ಜಾಗತಿಕ ಮಟ್ಟದಲ್ಲಿ ತಂದು ಹಿಂದುಧರ್ಮದ ವಿಶಾಲತೆಯನ್ನು ಮೆರೆದರು. ನೇತಾಜಿ ಸುಭಾಷ್ ಚಂದ್ರ ಬೋಸರು ‘ಇಂದು ವಿವೇಕಾನಂದರು ಏನಾದರೂ ಇದ್ದಿದ್ದರೆ ನಾನು ಅವರನ್ನು ನನ್ನ ಗುರುಗಳನ್ನಾಗಿ ಸ್ವೀಕರಿಸುತ್ತಿದ್ದೆ’ ಎಂದು ಹೇಳಿರುವರು. ವಿವೇಕಾನಂದರ ಸಲಹೆಯ ಮೇರೆಗೆ ಜೆಮ್ಶೆಡ್ಜಿ ಟಾಟಾರವರು ಬೆಂಗಳೂರಿನಲ್ಲಿ ‘ಭಾರತೀಯ ತಾತಾ ವಿಜ್ಞಾನ ಮಂದಿರ’ವನ್ನು ಸ್ಥಾಪಿಸಲು ಧನ ಸಹಾಯ ಮಾಡಿದರು.