Product Description
ಭಾರತವು ಒಂದು ಮಂದಿಯಾಳ್ವಿಕೆ(ಪ್ರಜಾಪ್ರಭುತ್ವ) ಎಂದು ಕರೆಯಿಸಿಕೊಳ್ಳುತ್ತದೆ. ಕನ್ನಡ-ಕನ್ನಡಿಗ-ಕರ್ನಾಟಕಗಳು ಭಾರತದ ಮಂದಿಯಾಳ್ವಿಕೆಯಲ್ಲಿ ಎಂತಹ ಸ್ಥಾನ ಪಡೆದುಕೊಂಡಿವೆ ಎಂಬ ಪ್ರಶ್ನೆಯನ್ನರಸುತ್ತಾ ಬರೆಯಲಾದ ಅಂಕಣಗಳ ಸಂಕಲನವೇ “ಮಂದಿಯಾಳ್ವಿಕೆಯಲ್ಲಿ ಕನ್ನಡಿಗ” ಹೊತ್ತಗೆ. ರಾಜಕೀಯವೆಂಬುದು ಕೆಟ್ಟದು ಎಂದು ನೋಡುತ್ತಾ, ಕನ್ನಡಿಗರು ರಾಜಕೀಯವಾಗಿ ಚಿಂತಿಸುವುದನ್ನೇ ಬಿಟ್ಟು ರಾಜಕೀಯ ಪ್ರಜ್ಞೆಯನ್ನು ಕಳೆದುಕೊಂಡಂತಾಗಿದ್ದಾರೆ, ಅದರಿಂದಾಗಿ ಕನ್ನಡಿಗರು ಎದುರಿಸುತ್ತಿರುವ ತೊಂದರೆಗಳೇನು ಎಂಬ ವಿಷಯವನ್ನು ಈ ಹೊತ್ತಗೆಯಲ್ಲಿ ಹೆಚ್ಚಾಗಿ ಚರ್ಚಿಸಲಾಗಿದೆ. ನಾಡಿನ ಹೊಸ ತಲೆಮಾರಿನ ಚಿಂತಕರಾದ ಶ್ರೀ ಕಿರಣ್ ಬಾಟ್ನಿ ಅವರು ಬರೆದಿರುವ ಈ ಹೊತ್ತಗೆಯಲ್ಲಿನ ಅಂಕಣಗಳು ’ಹೊಸಬರಹ’ದಲ್ಲಿದೆ.