Product Description
ತೊಟ್ಟಿಲು ತೂಗುತ್ತಾ...ಜೋಗುಳ ಹಾಡುತ್ತಾ... ಮಗುವಿಗೆ ಸುಖನಿದ್ರೆ ಬರಲೆಂದು ಹಾರೈಸುವುದು ಎಲ್ಲ ಮನೆಗಳಲ್ಲಿ ಸಾಮಾನ್ಯ. ಅಂದಿನಿಂದ ಮನುಷ್ಯನ ಜೀವಿತಾವಧಿಯಲ್ಲಿ ಒಂದಷ್ಟು ಗಂಟೆಗಳ ಕಾಲ ನಿದ್ರೆ ಸ್ನೇಹಿತನಂತೆ ಜೊತೆಗಿರುತ್ತದೆ. ನಿದ್ರೆಯಿಂದ ಎಚ್ಚೆತ್ತಾಗ ಲವಲವಿಕೆ, ನಿದ್ರೆಗೆಟ್ಟರೆ ಅಂದಿನ ಕೆಲಸಕಾರ್ಯಗಳು ಅಸ್ತವ್ಯಸ್ತ. ಇದರಿಂದ ನಿದ್ರೆಯ ಅವಶ್ಯಕತೆ ಎಷ್ಟೆಂದು ತಿಳಿಯುತ್ತದೆ. ನಿದ್ರೆಯಲ್ಲಿ ಕನಸುಗಳು ಬೀಳುತ್ತವೆ. ಕನಸುಗಳು ಮನುಷ್ಯನ ಸುಪ್ತ ಮನಸ್ಸಿನ ನೆರವೇರದ ಆಕಾಂಕ್ಷೆಗಳೆಂದೂ ಮನೋವಿಜ್ಞಾನ ವಿಶ್ಲೇಷಿಸುತ್ತದೆ. ಕನಸಿನಲ್ಲಿ ಕಂಡುದು ನಿಜವಾಗುತ್ತದೆಂಬ ಭ್ರಮೆ, ಮೂಢನಂಬಿಕೆ ಸಮಾಜದಲ್ಲಿದೆ. ನಿದ್ರೆ ಹಾಗೂ ಕನಸುಗಳಿಗೆ ಸಂಬಂಧಿಸಿದಂತೆ ಜನರಲ್ಲಿರುವ ತಪ್ಪು ನಂಬಿಕೆಗಳು, ಗೊಂದಲ, ಭಯ - ಇವನ್ನು ಹೋಗಲಾಡಿಸಲು ಪ್ರಶ್ನೋತ್ತರ ರೂಪದಲ್ಲಿ, ಈ ಪುಸ್ತಕದಲ್ಲಿ ಸಲಹೆ ಸೂಚನೆ ನೀಡಲಾಗಿದೆ.