Quantity
Product Description
'ಸುದ್ದಿ ಸಂಗಾತಿಯ ಸ್ವಗತ'
ಆಕಾಶವಾಣಿಯ ನಿವೃತ್ತ ಸುದ್ದಿ ಸಂಪಾದಕಿ ನಾಗಮಣಿ ಎಸ್. ರಾವ್ ಅವರ ಆತ್ಮಕಥನ.
ಐವತ್ತು- ಅರವತ್ತರ ದಶಕದಲ್ಲೇ ಪತ್ರಿಕಾರಂಗ ಮತ್ತು ಆಕಾಶವಾಣಿ ಪ್ರವೇಶಿಸಿದ ಹಿರಿಯ ಪತ್ರಕರ್ತೆಯ ಜೀವನದ ಅದ್ಭುತ ಅನುಭವ ಕಥನ.
ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ತರಗತಿಯಲ್ಲಿ ನಾಗಮಣಿ ಅವರ ಸಹಪಾಠಿಯಾಗಿದ್ದ ನಾಡೋಜ
ಡಾ. ಹಂ ಪ ನಾಗರಾಜಯ್ಯ ಅವರು ಈ ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ ಎನ್ನುವುದೂ ಒಂದು ಅಪೂರ್ವ ಸಂದರ್ಭ.
ಆಕಾಶವಾಣಿಯಲ್ಲಿ ದಶಕಗಳ ಕಾಲ ನಾಗಮಣಿ ಅವರ ಸುವ್ವಿದನಿಯ ಸುದ್ದಿ ವಾಚನ ಕನ್ನಡ ಮಾಧ್ಯಮ ಲೋಕದಲ್ಲಿ ಮರೆಯಲಾಗದ ಮಿಂಚುಮಿನುಗು!
'ಸುದ್ದಿಸಂಗಾತಿಯ ಸ್ವಗತ' ದಲ್ಲಿ
ನಾಗಮಣಿ ಅವರ ಮಾಧ್ಯಮರಂಗದಲ್ಲಿನ ದಶಕಗಳ ಅನುಭವವನ್ನು ಮತ್ತು ಅವರು 'ಕರ್ನಾಟಕ ಲೇಖಕಿಯರ ಸಂಘ' ದ ಅಧ್ಯಕ್ಷೆಯಾಗಿ ಮಾಡಿದ ವಿಶಿಷ್ಟ ಕಾರ್ಯಗಳನ್ನು
ಮಾಲತಿ ಭಟ್ ಸಂಯೋಜಿಸಿ ದಾಖಲಿಸಿದ್ದಾರೆ. ಆರ್. ಪೂರ್ಣಿಮಾ
'ವಿಕಾಸ ಪ್ರಕಾಶನ' ದಿಂದ ಪ್ರಕಟಿಸಿದ್ದಾರೆ.
ಏಪ್ರಿಲ್ 6, ಭಾನುವಾರ
ಬೆಳಿಗ್ಗೆ 10.30 ಕ್ಕೆ ಬೆಂಗಳೂರಿನ ಎನ್.ಆರ್. ಕಾಲೋನಿಯ ಬಿಎಂಶ್ರೀ ಪ್ರತಿಷ್ಠಾನದ ಸಭಾಂಗಣದಲ್ಲಿ ಸಮಾರಂಭ ನಡೆಯಲಿದೆ. ಎಚ್.ಎಲ್. ಪುಷ್ಪ, ಕೆ.ಎಚ್. ಸಾವಿತ್ರಿ, ಆಯೇಶಾ ಖಾನಂ,
ಪದ್ಮಾ ಶಿವಮೊಗ್ಗ ಅವರೆಲ್ಲ ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
Author
Malathi Bhat
Binding
Soft Bound
Number of Pages
208
Publication Year
2025
Publisher
Vikasa Prakashana
Height
2 CMS
Length
22 CMS
Weight
300 GMS
Width
14 CMS
Language
Kannada