Quantity
Product Description
ಇಲ್ಲಿರುವ ಬಹುತೇಕ ಕತೆಗಳೂ ಕನ್ನಡ ಸಾಹಿತ್ಯ ನವ್ಯ ಸಾಹಿತ್ಯದ ಉತ್ತುಂಗದಲ್ಲಿ ಇದ್ದಾಗ ಬರೆದಾಗಿನ ಕತೆಗಳು, ನವ್ಯ ಸಾಹಿತ್ಯ ಮನುಷ್ಯನ ಅನುಭವಕ್ಕೆ ಮತ್ತು ಆಂತರಿಕ ಭಾವನೆಗಳಿಗೆ ಆದ್ಯತೆ ನೀಡುತ್ತದೆ. ಸಾಂಪ್ರದಾಯಿಕ ಶೈಲಿಯನ್ನು ಬಿಟ್ಟು ಹೊಸ ರೀತಿಯ ಪ್ರಸ್ತುತಿಯನ್ನು ನವ್ಯ ಸಾಹಿತ್ಯ ಬಯಸುತ್ತದೆ. ಪ್ರತಿಮೆ ಮತ್ತು ರೂಪಕಗಳ ಮೂಲಕ ಕತೆಯನ್ನು ಹೇಳುವುದು ನವ್ಯ ಸಾಹಿತ್ಯದ ವಿಶಿಷ್ಟತೆ. ಇಂತಹ ಪ್ರಯತ್ನದಲ್ಲಿ ನಾರಾಯಣ ಗಿಂಡೀಮನೆ ಅವರು ಯಶಸ್ವಿಯಾಗಿದ್ದಾರೆ. ಗಿಂಡೀಮನೆ ಅವರಿಗೆ ಕಥನ ಕಲೆ ಸಹಜವಾಗಿಯೇ ಸಿದ್ದಿಸಿದೆ. ಇಲ್ಲಿರುವ ಯಾವ ಕತೆಗಳಲ್ಲಿಯೂ ಅವಸರವಿಲ್ಲ. ಆಕ್ರೋಶವಿಲ್ಲ. ಯಾವುದೂ ಕೃತಕ ಎನ್ನಿಸುವುದಿಲ್ಲ. ಸಹಜವಾದ ಕತೆಗಳು. ಭಾಷೆಯೂ ಸರಳ. ಸಾಹಿತ್ಯ ಇರುವುದು ಅರ್ಥವಾಗುವುದಕ್ಕೆ ಅಲ್ಲ, ಅರ್ಥ ಮಾಡಿಕೊಳ್ಳುವುದಕ್ಕೆ ಎಂಬ ಮಾತೊಂದಿದೆ. ಆದರೆ ಇಲ್ಲಿನ ಕತೆಗಳು ಸರಳವಾಗಿ ಅರ್ಥವಾಗುತ್ತವೆ. ಆಳಕ್ಕೆ ಇಳಿದರೆ ಹೊಸ ಹೊಸ ಅರ್ಥಗಳನ್ನೂ ಸೂಸುತ್ತವೆ. ಸಾಮಾನ್ಯವಾಗಿ ನವ್ಯ ಕತೆಗಳು ರೂಪಕಗಳ ಮೇಲೆ ನಿಂತಿರುತ್ತವೆ. ಅದನ್ನು ಬಿಟ್ಟು ಸರಳವಾಗಿಯೂ ನವ್ಯ ಕತೆಗಳನ್ನು ಹೆಣೆಯಬಹುದು ಎನ್ನುವುದಕ್ಕೆ ಇಲ್ಲಿನ ಕತೆಗಳು ಉದಾಹರಣೆಯಂತೆ ಇವೆ.
ರವೀಂದ್ರಭಟ್ಟ
...ಇಂಥ ಅಳಲನುಲಿಯಬಲ್ಲ ಬಾಯಿಯಲ್ಲಿದೆ?' ಕಥೆಯಲ್ಲಿ ಅಣೆಕಟ್ಟಿನ ನಿರ್ಮಾಣದ ಜೊತೆಗೇ ಹಳ್ಳಿಯೊಂದಕ್ಕೆ ಮೂಡುವ ಕ್ರಿಯಾತ್ಮಕತೆ, ವ್ಯವಸ್ಥಿತ ಜೀವನದಲ್ಲಿ ಹೊಸದಾಗಿ ಕಾಣಿಸಿಕೊಳ್ಳುವ ಕವಲುಗಳು, ಶಾರಕ್ಕನ ಆಸ್ತಿಯ ಆಸೆಯಿಂದ ದೂರದ ಸಂಬಂಧದ ಅಣ್ಣ ಹಾಗು ಭಾವ ಅವಳ ಬಗ್ಗೆ ತೋರುವ ಅತಿಯಾದ ಪ್ರೀತಿ, ಸೋಷಿಯಲಿಸ್ಟ್ನ ಆಗಮನದಿಂದ ಒಕ್ಕಲುಗಳಲ್ಲಿ ಅರಳಿಕೊಳ್ಳುವ ಪರಿಸರ ಪ್ರಜ್ಞೆ-ಇತ್ಯಾದಿಗಳನ್ನು ದಪ್ಪಗೆರೆಗಳಲ್ಲಿ ಕುಂಚಿಸದೆ ಆದರೆ ಅವುಗಳು ಮನಸ್ಸನ್ನು ಆಕ್ರಮಿಸುವ ಹಾಗೆ ರೇಖಿಸಿರುವುದು ಕೌಶಲಪೂರ್ಣವೆನ್ನಿಸುತ್ತದೆ. ಒಕ್ಕಲುಗಳ ಉದ್ಧಾರಕ್ಕೆ ಬಂದ ಸೋಷಿಯಲಿಸ್ಟ್ ಕೊನೆಯಲ್ಲಿ ಅನುಭವಿಸುವ ಅಪಮಾನ, ತೇಜೋವಧೆ, ವ್ಯವಸ್ಥೆ ತನ್ನ ಬದಲಾವಣೆಯನ್ನು ಹೇಗೆ ತೊಡೆದುಕೊಳ್ಳಬಲ್ಲದು ಎಂಬುದಕ್ಕೆ ಸಂಕೇತವಾಗುತ್ತದೆ.
- ಕೆ. ಎಸ್. ನಿಸಾರ್ ಅಹಮದ್
Author
Narayana Gindimane
Binding
Soft Bound
Number of Pages
156
Publication Year
2025
Publisher
Amulya Pustaka
Height
2 CMS
Length
22 CMS
Weight
200 GMS
Width
14 CMS
Language
Kannada